ಧರ್ಮಸ್ಥಳ ಪ್ರಕರಣ: ಮಾಸ್ಕ್‌ ಮ್ಯಾನ್‌ ಅರೆಸ್ಟ್ – SIT ತನಿಖೆ ಚುರುಕು!

ಆಗಸ್ಟ್ 23, 2025 - 10:18
 0  18
ಧರ್ಮಸ್ಥಳ ಪ್ರಕರಣ: ಮಾಸ್ಕ್‌ ಮ್ಯಾನ್‌ ಅರೆಸ್ಟ್ – SIT ತನಿಖೆ ಚುರುಕು!

ಬೆಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಬೆಳವಣಿಗೆ ನಡೆದಿದೆ. ಈ ಪ್ರಕರಣದಲ್ಲಿ ಪ್ರಮುಖ ಸುಳಿವು ನೀಡಿದ್ದ ಮುಸುಕುಧಾರಿ ಮಾಸ್ಕ್‌ ಮ್ಯಾನ್ ಅನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿದೆ.

ಮಾಸ್ಕ್‌ ಧರಿಸಿ "ನಾನೇ ಹೆಣಗಳನ್ನು ಹೂತಿಟ್ಟಿದ್ದೇನೆ" ಎಂದು ಹೇಳಿಕೆ ನೀಡಿದ್ದ ವ್ಯಕ್ತಿಯನ್ನು ಸತತ ವಿಚಾರಣೆಯ ನಂತರ SIT ವಶಕ್ಕೆ ತೆಗೆದುಕೊಂಡಿದೆ.

ಈ ಬೆಳವಣಿಗೆ ರಾಜ್ಯದಷ್ಟೇ ಅಲ್ಲ, ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಸಾಕ್ಷಿದಾರನಂತೆ ತಾನೇ ಹೇಳಿಕೊಂಡಿದ್ದ ವ್ಯಕ್ತಿ ಇದೀಗ ಆರೋಪಿಯಾಗಿ ಪರಿವರ್ತನೆಗೊಂಡಿದ್ದು, ತನಿಖೆ ಇನ್ನಷ್ಟು ಚುರುಕುಗೊಂಡಿದೆ.

SIT ಅಧಿಕಾರಿಗಳು ಪ್ರಕರಣದ ಆಳವಾದ ತನಿಖೆ ಕೈಗೊಂಡಿದ್ದು, ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow