ಧರ್ಮಸ್ಥಳ ಬಂಗ್ಲೆಗುಡ್ಡ ಪತ್ತೆಯಾದ ಅಸ್ಥಿಪಂಜರ ಪ್ರಕರಣಕ್ಕೆ ರೋಚಕ ಟ್ವಿಸ್ಟ್.!

ಸೆಪ್ಟೆಂಬರ್ 18, 2025 - 18:15
 0  16
ಧರ್ಮಸ್ಥಳ ಬಂಗ್ಲೆಗುಡ್ಡ ಪತ್ತೆಯಾದ ಅಸ್ಥಿಪಂಜರ ಪ್ರಕರಣಕ್ಕೆ ರೋಚಕ ಟ್ವಿಸ್ಟ್.!

ಮಂಗಳೂರು: ಬಂಗ್ಲೆಗುಡ್ಡ ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾದ ಅಸ್ಥಿಪಂಜರ, ತಲೆ ಬುರುಡೆ ಹಾಗೂ ಮೂಳೆಗಳ ತನಿಖೆಗೆ ಬಿಗ್ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.  ಅಸ್ಥಿಪಂಜರದ ಪಕ್ಕದಲ್ಲಿ ಪತ್ತೆಯಾದ ಐಡಿ ಕಾರ್ಡ್ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಯು.ಬಿ. ಅಯ್ಯಪ್ಪ ಎಂದು ಪತ್ತೆಯಾಗಿದೆ. ಅಯ್ಯಪ್ಪ 2017ರಲ್ಲಿ “ಮೈಸೂರಿನ ಆಸ್ಪತ್ರೆಗೆ ಹೋಗುತ್ತೇನೆ” ಎಂದು ಮನೆಯಿಂದ ಹೊರಟಿದ್ದರು.

ಬೆಳಗ್ಗೆ 11.30 ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ನಂತರ ಯಾವುದೇ ಸುಳಿವು ಸಿಗಲಿಲ್ಲ. ಕುಟುಂಬಸ್ಥರ ಹುಡುಕಾಟ ವಿಫಲವಾದ ಹಿನ್ನೆಲೆಯಲ್ಲಿ, ಪುತ್ರ ಜೀವನ್ ಅವರು ಕುಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 15-06-2017ರಂದು ಎಫ್‌ಐಆರ್ ದಾಖಲಾಗಿತ್ತು.

ಪತ್ತೆಯಾದ ತಲೆ ಬುರುಡೆ ಮತ್ತು ಮೂಳೆಗಳು ನೇಣು ಹಾಕಿಕೊಂಡ ಸ್ಥಿತಿಯಲ್ಲಿದ್ದವು. ಅಸ್ಥಿಪಂಜರದ ಪಕ್ಕದಲ್ಲೇ ಹಿರಿಯ ನಾಗರಿಕರ ಕಾರ್ಡ್ ಸಹ ಪತ್ತೆಯಾಗಿದೆ. ಶೋಧದಲ್ಲಿ ಎರಡು ಹಗ್ಗಗಳು ಮತ್ತು ಒಂದು ಸೀರೆ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಗ್ಗ ಪತ್ತೆಯಾದ ಮರದ ಕೆಳಭಾಗದಲ್ಲೇ ಅಸ್ಥಿಪಂಜರ ದೊರೆತಿದ್ದು, ಆತ್ಮಹತ್ಯೆಯ ಸುಳಿವು ಸ್ಪಷ್ಟವಾಗಿದೆ.

ಐಡಿ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್, ಹಗ್ಗ, ಸೀರೆ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆದು ಸೀಲ್ ಮಾಡಲಾಗಿದೆ. ಅಯ್ಯಪ್ಪ ಅವರದೇ ಅಸ್ಥಿಪಂಜರವೇ ಎಂಬುದನ್ನು ದೃಢೀಕರಿಸಲು ಡಿಎನ್‌ಎ ಪರೀಕ್ಷೆ ನಡೆಸುವ ಸಾಧ್ಯತೆ ಇದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow