“ನಾ ನಿನ್ನ ಬಿಡಲಾರೆ” ಧಾರಾವಾಹಿಯಿಂದ ಮಾಯಾ ಪಾತ್ರಧಾರಿ ಔಟ್.! ಕೋಳಿ ರಮ್ಯಾ ಎಂಟ್ರಿ

ಅಕ್ಟೋಬರ್ 24, 2025 - 20:02
 0  7
“ನಾ ನಿನ್ನ ಬಿಡಲಾರೆ” ಧಾರಾವಾಹಿಯಿಂದ ಮಾಯಾ ಪಾತ್ರಧಾರಿ ಔಟ್.! ಕೋಳಿ ರಮ್ಯಾ ಎಂಟ್ರಿ

ಜನಪ್ರಿಯ ಧಾರಾವಾಹಿ ‘ನಾ ನಿನ್ನ ಬಿಡಲಾರೆ’ ಉತ್ತಮ ಟಿಆರ್‌ಪಿ ಪಡೆಯುತ್ತಾ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಬಿಗ್ ಬಾಸ್ ಶೋ ಮಧ್ಯೆಯೂ ಧಾರಾವಾಹಿ ತನ್ನ ಪ್ರೇಕ್ಷಕರನ್ನು ಕಟ್ಟಿ ಹಿಡಿದಿದೆ. ಇದೇ ವೇಳೆಯಲ್ಲಿ ಧಾರಾವಾಹಿಯ ಪ್ರಮುಖ ಪಾತ್ರವಾದ ಮಾಯಾ ಪಾತ್ರಧಾರಿ ರುಹಾನಿ ಶೆಟ್ಟಿ ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿಯುಂಟುಮಾಡಿದೆ

. ರುಹಾನಿ ಶೆಟ್ಟಿ ಅವರು ಏಕಾಏಕಿ ಶೋ ಬಿಡಲು ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ನಿರ್ಗಮನಕ್ಕೆ ಸಂಬಂಧಿಸಿದಂತೆ ಧಾರಾವಾಹಿ ತಂಡದಿಂದ ಅಥವಾ ರುಹಾನಿಯಿಂದ ಅಧಿಕೃತ ಮಾಹಿತಿ ಬಂದಿಲ್ಲ.

ಆದರೆ ಇತ್ತೀಚಿನ ಎಪಿಸೋಡ್‌ಗಳಲ್ಲಿ ಅವರು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಅನುಮಾನ ಬಂದಿದೆ. ಇದರ ಬೆನ್ನಲ್ಲೇ  ಈ ಧಾರಾವಾಹಿಯ ಹೊಸ ಪ್ರೋಮೋ ಬಿಡುಗಡೆ ಕಂಡಿದೆ. ಇದರಲ್ಲಿ ಮಾಯಾ ಪಾತ್ರಕ್ಕೆ ಬೇರೆಯವರು ಬಂದಿರೋದು ಗೊತ್ತಾಗಿದೆ. ಇದು ರುಹಾನಿ ಶೆಟ್ಟಿ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ರುಹಾನಿ ಹೇಳಿದ್ದು ಏನು?

‘ನಾನು ನಿಮ್ಮೆಲ್ಲರ ಮೆಸೇಜ್ ಹಾಗೂ ಕಮೆಂಟ್ ಓದುತ್ತಿದ್ದೇನೆ. ನೀವು ಸೂಪರ್. ನಿಮ್ಮಿಂದ ಸಾಕಷ್ಟು ಪ್ರೀತಿ ಸಿಕ್ಕಿದೆ. ನಿಮ್ಮ ಪ್ರೀತಿಗೆ ಧನ್ಯವಾದ. ಹೊಸ ಪ್ರಾಜೆಕ್ಟ್​ನೊಂದಿಗೆ ಬರುತ್ತೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ’ ಎಂದು ರುಹಾನಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರು ವಿಲನ್ ಪಾತ್ರಕ್ಕೆ ಹೆಚ್ಚು ಸೂಕ್ತ ಆಗುತ್ತಿದ್ದರು ಎಂದು ಅನೇಕರು ಹೇಳಿದ್ದಾರೆ.

ರಮ್ಯಾ ಬಾಲಕೃಷ್ಣ

ಸದ್ಯ ರುಹಾನಿ ಮಾಡುತ್ತಿದ್ದ ಮಾಯಾ ಪಾತ್ರಕ್ಕೆ ರುಹಾನಿ ಬಾಲಕೃಷ್ಣ ಅವರ ಆಗಮನ ಆಗಿದೆ. ಅವರು ಕಿರುತೆರೆಗಳಲ್ಲಿ ನಟಿಸಿ ಫೇಮಸ್ ಆದವರು. ಇತ್ತೀಚೆಗೆ "ಮಿಥುನ ರಾಶಿ" ಸೀರಿಯಲ್​ನಲ್ಲಿ ವಿಲನ್ ರೋಲ್​ ಮಾಡಿದ್ದರು. ಇವರು ನಿರೂಪಕಿಯೂ ಆಗಿದ್ದಾರೆ ಮತ್ತು ಕನ್ನಡ, ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅವರು ಇನ್ನುಮುಂದೆ ಮಾಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ವಿಶೇಷ. ಅವರು ಈ ಪಾತ್ರವನ್ನು ಯಾವ ರೀತಿ ನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow