India vs Australia 3ನೇ ಏಕದಿನ ಯಾವಾಗ? ಎಲ್ಲಿ? ಕೊನೆಯ ಪಂದ್ಯವಾದ್ರೂ ಗೆಲ್ಲುತ್ತಾ?

ಅಕ್ಟೋಬರ್ 24, 2025 - 21:12
 0  15
India vs Australia 3ನೇ ಏಕದಿನ ಯಾವಾಗ? ಎಲ್ಲಿ? ಕೊನೆಯ ಪಂದ್ಯವಾದ್ರೂ ಗೆಲ್ಲುತ್ತಾ?

ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೆಟ್ಟ ಸರಣಿ ಮುಂದುವರಿಯುತ್ತಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದರೂ, ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿದೆ. ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 2 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ.

ಮೂರನೇ ಏಕದಿನ ಪಂದ್ಯ ವಿವರಗಳು:

  • ದಿನಾಂಕ: ಶನಿವಾರ, ಅಕ್ಟೋಬರ್ 24

  • ಸ್ಥಳ: ಸಿಡ್ನಿ ಕ್ರಿಕೆಟ್ ಮೈದಾನ, ಸಿಡ್ನಿ

  • ಸಮಯ: ಸ್ಥಳೀಯ ಸಮಯ: ಮಧ್ಯಾಹ್ನ 2:00; ಭಾರತ ಸಮಯ: ಬೆಳಿಗ್ಗೆ 9:00

  • ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ (ಟಿವಿ) ಮತ್ತು ಜಿಯೋಸಿನಿಮಾ (ಆಪ್ & ವೆಬ್‌ಸೈಟ್)

ಭಾರತದ ತಂಡದಲ್ಲಿ ಬದಲಾವಣೆ ಸಾಧ್ಯತೆ:
ಮೊದಲ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಪರಿಣಾಮಕಾರಿತ್ವ ಕಡಿಮೆ ಕಾಣಿರುವುದರಿಂದ, ಮೂರನೇ ಏಕದಿನಕ್ಕೆ ಟೀಮ್ ಇಂಡಿಯಾ ಕೆಲ ಬದಲಾವಣೆಗಳನ್ನು ಮಾಡಬಹುದು. ಕೆಎಲ್ ರಾಹುಲ್‌ಗೆ ವಿಶ್ರಾಂತಿ ನೀಡಿ ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸಲು ಸಾಧ್ಯತೆ ಇದೆ. ಉಳಿದಂತೆ ಇತರ ವಿಭಾಗಗಳಲ್ಲಿ ಬದಲಾವಣೆ ಆಗಬಹುದೆಂದು ನಿರೀಕ್ಷಿಸಲಾಗಿದೆ.

ಆಸ್ಟ್ರೇಲಿಯಾದಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೆಟ್ಟ ಕಾಲ ಮುಗಿಯುವಂತೆ ಕಾಣುತ್ತಿಲ್ಲ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ ನಂತರ, ತಂಡವು ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸುವ ಭರವಸೆಯಲ್ಲಿತ್ತು,

ಆದರೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯ ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಈ ಭರವಸೆಯನ್ನು ಹುಸಿಗೊಳಿಸಿದೆ. ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಭಾರತವನ್ನು 2 ವಿಕೆಟ್‌ಗಳಿಂದ ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದೀಗ ಉಳಿದಿರುವ ಕೊನೆಯ ಪಂದ್ಯವನ್ನಾದರೂ ಗೆದ್ದು ಮಾನ ಉಳಿಸುವ ಪ್ಲ್ಯಾನ್​ನಲ್ಲಿ ಗಿಲ್ ಪಡೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow