Asia Cup 2025: ಬಿಗ್ ಅಪ್​ ಡೇಟ್: ಟಿ20 ತಂಡದಿಂದ ಶುಭ್​ಮನ್ ಗಿಲ್ ಕೈಬಿಡುವ ಸಾಧ್ಯತೆ!

ಆಗಸ್ಟ್ 19, 2025 - 09:01
 0  25
Asia Cup 2025: ಬಿಗ್ ಅಪ್​ ಡೇಟ್: ಟಿ20 ತಂಡದಿಂದ ಶುಭ್​ಮನ್ ಗಿಲ್ ಕೈಬಿಡುವ ಸಾಧ್ಯತೆ!

ಮುಂಬರುವ ಏಷ್ಯಾಕಪ್ 2025 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸೂರ್ಯಕುಮಾರ್ ಯಾದವ್ ನೇತೃತ್ವದ ಟಿ20 ತಂಡವನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಲು ಆಯ್ಕೆ ಸಮಿತಿ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಆದರೆ ಗಿಲ್ ಅವರನ್ನು ಕೈಬಿಡುವುದು ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿರಲಿದೆ. ಏಕೆಂದರೆ ಗಿಲ್ ಕಳೆದ ವರ್ಷ ಶ್ರೀಲಂಕಾ ಪ್ರವಾಸದಲ್ಲಿ ಟಿ20 ಉಪನಾಯಕತ್ವ ವಹಿಸಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲೂ ಉಪನಾಯಕರಾಗಿದ್ದರು. ಇತ್ತೀಚೆಗೆ ಟೆಸ್ಟ್ ತಂಡದ ನಾಯಕರಾಗಿಯೂ ಹೊಣೆ ಹೊತ್ತಿದ್ದಾರೆ.

ಇದಲ್ಲದೆ ಗಿಲ್ ಐಪಿಎಲ್ 2024ರಲ್ಲಿ 650 ರನ್ ಕಲೆಹಾಕಿ, 155 ಸ್ಟ್ರೈಕ್ ರೇಟ್ ಸಾಧಿಸಿದ್ದರು. ಅಂಕಿಅಂಶಗಳು ಅವರನ್ನು ಟಿ20 ತಂಡಕ್ಕೆ ಸೂಕ್ತ ಅಭ್ಯರ್ಥಿಯಾಗಿಸುತ್ತವೆ. ಆದರೆ ತಂಡದ ಸಮತೋಲನದ ದೃಷ್ಟಿಯಿಂದ ಅವರ ಸ್ಥಾನ ಕುರಿತು ಗೊಂದಲ ಎದುರಾಗಿದೆ.

ಪ್ರಸ್ತುತ ಆರಂಭಿಕರಾಗಿ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಇದ್ದಾರೆ. ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಮಿಂಚುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಸ್ಥಾನ ಭದ್ರವಾಗಿದೆ. ಹೀಗಾಗಿ ಗಿಲ್ ಅವರನ್ನು ಕೆಳ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತವಲ್ಲವೆಂದು ಚರ್ಚೆ ನಡೆದಿದೆ.

ಇದೇ ಹಿನ್ನೆಲೆಯಲ್ಲಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮುಂಬೈನಲ್ಲಿ ನಡೆಯುವ ಸಭೆಯ ಮೊದಲು ಗಿಲ್ ಅವರನ್ನು ಕೈ ಬಿಡುವ ನಿರ್ಧಾರವನ್ನು ಬಿಸಿಸಿಐ ಉನ್ನತಾಧಿಕಾರಿಗಳಿಗೆ ತಿಳಿಸಲಿದೆ. ಇದಾದ ಬಳಿಕ ಅಂತಿಮ ಚರ್ಚೆ ನಡೆಯುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow