Darshan Case: ನಟ ದರ್ಶನ್ʼಗೆ ಹೊಸ ಸಂಕಷ್ಟ; ಬಳ್ಳಾರಿಗೆ ಶಿಫ್ಟ್ ಆಗ್ತಾರಾ..?

ಆಗಸ್ಟ್ 18, 2025 - 11:37
 0  15
Darshan Case: ನಟ ದರ್ಶನ್ʼಗೆ ಹೊಸ ಸಂಕಷ್ಟ; ಬಳ್ಳಾರಿಗೆ ಶಿಫ್ಟ್ ಆಗ್ತಾರಾ..?

ನಟ ದರ್ಶನ್ ಅವರ ಜಾಮೀನು ರದ್ದಾದ ಹಿನ್ನೆಲೆ ಅವರು ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿದೆ. ಸದ್ಯ ಅವರು ಅಗ್ರಹಾರ ಜೈಲಿನಲ್ಲೇ ಬಂಧಿತರಾಗಿದ್ದು, ಈ ಬಾರಿ ವಿಶೇಷ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ದರ್ಶನ್ ಅವರನ್ನು ಒಂಟಿ ಬ್ಯಾರಕ್‌ನಲ್ಲಿ ಇರಿಸಲಾಗಿದ್ದು, ಭೇಟಿಗೆ ಯಾರನ್ನೂ ಬಿಡಲಾಗುತ್ತಿಲ್ಲ. ಅಲ್ಲದೆ ಬ್ಯಾರಕ್ ಬಳಿ ಬ್ಯಾರಿಕೇಡ್‌ಗಳನ್ನೂ ಹಾಕಲಾಗಿದೆ. ಜೈಲು ಅಧಿಕಾರಿಗಳು ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ಆದರೆ ದರ್ಶನ್ ಪರ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ದರ್ಶನ್ ಬಂಧಿತನಾದ ದಿನವೇ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ವಕೀಲರು, ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಬಾರದು ಎಂದು ಮನವಿ ಮಾಡಿದ್ದಾರೆ.

ಟ್ರಯಲ್ ಪ್ರಕ್ರಿಯೆ ಆರಂಭವಾದ ನಂತರ ಬೇರೆ ಜಿಲ್ಲೆಯಿಂದ ಕರೆತರಲು ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದ ಪರಪ್ಪನ ಅಗ್ರಹಾರದಲ್ಲೇ ಇರಿಸಬೇಕು ಎಂದು ವಕೀಲರು ಒತ್ತಾಯಿಸುತ್ತಿದ್ದಾರೆ. ಇದರಿಂದ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸುವ ವಿಷಯದ ಕುರಿತು ಅಂತಿಮ ತೀರ್ಮಾನ ಕೋರ್ಟ್ ಕೈಗೆತ್ತಿಕೊಳ್ಳಬೇಕಿದೆ

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow