ನನಗೆ ಬದುಕೋಕೆ ಆಗುತ್ತಿಲ್ಲ, ಸ್ವಲ್ಪ ವಿಷ ಕೊಡಿ: ಜಡ್ಜ್ ಮುಂದೆ ನಟ ದರ್ಶನ್ ಕಣ್ಣೀರು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ನ್ಯಾಯಾಲಯದ ಮುಂದೆ ಕಣ್ಣೀರು ಹಾಕಿದ್ದಾರೆ. ಜೈಲಿನ ಜೀವನ ತಾಳಲಾಗದ ಪರಿಸ್ಥಿತಿ ಎದುರಾಗಿದೆ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ.
“ಇಲ್ಲಿ ಇರೋಕೆ ಆಗ್ತಿಲ್ಲ… ನನಗೆ ವಿಷವನ್ನಾದರೂ ಕೊಟ್ಟುಬಿಡಿ. ಬಿಸಿಲು ನೋಡಿದ್ದು ತುಂಬಾ ದಿನ ಆಯ್ತು. ಕೈಯೆಲ್ಲಾ ಫಂಗಸ್ ಬಂದಿದೆ. ಬಟ್ಟೆಗಳಲ್ಲಿ ದುರ್ವಾಸನೆ ಬರುತ್ತಿದೆ. ಬದುಕೋಕೆ ಸಾಧ್ಯವಾಗುತ್ತಿಲ್ಲ” ಎಂದು ದರ್ಶನ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ.
ಆದರೆ, “ಹೀಗೆ ಸಾಧ್ಯವಿಲ್ಲ” ಎಂದು ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್, ಜೈಲಿನ ಜೀವನಕ್ಕೆ ಹೊಂದಿಕೊಳ್ಳಲು ಹೋರಾಟ ನಡೆಸುತ್ತಿದ್ದು, ಅವರ ಇಂದಿನ ಪರಿಸ್ಥಿತಿ ನಿಜಕ್ಕೂ ಕಣ್ಣೀರು ತರಿಸುವಂತಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?