ನಾವು ಕಳ್ಳತನ ಮಾಡಿಲ್ಲ: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆ ಕೆಲಸದವರ ಹೇಳಿಕೆ.!
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಮೂವರು ಮನೆ ಕೆಲಸದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜು, ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಣ ಕಳವಾದ ದಿನ ಮನೆಯಲ್ಲಿ ಮೂವರು ಕೆಲಸದವರು, ಮ್ಯಾನೇಜರ್ ನಾಗರಾಜು ಹಾಗೂ ವಿಜಯಲಕ್ಷ್ಮಿ ತಾಯಿ ಇದ್ದರು.
ಫ್ಲಾಟ್‌ನ ಒಳಗೆ ಸಿಸಿಟಿವಿ ಕ್ಯಾಮೆರಾ ಇರದ ಕಾರಣ ಕಳ್ಳತನ ಹೇಗೆ ನಡೆದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಲಿಫ್ಟ್, ಸೆಕ್ಯುರಿಟಿ ಗಾರ್ಡ್ ಮತ್ತು ಗಾರ್ಡನ್ ಏರಿಯಾದಲ್ಲಿ ಮಾತ್ರ ಸಿಸಿಟಿವಿ ಇದ್ದು, ಅವುಗಳನ್ನು ಪರಿಶೀಲಿಸಿದಾಗ ಬೇರೆ ಯಾರೂ ಫ್ಲಾಟ್‌ಗೆ ಪ್ರವೇಶಿಸಿಲ್ಲ ಎಂಬುದು ತಿಳಿದುಬಂದಿದೆ.
ಪ್ರಸ್ತುತ ಮನೆ ಕೆಲಸದವರ ವಿಚಾರಣೆ ಪೂರ್ಣಗೊಂಡಿದ್ದು,ಆದರೆ, ಅವರು ಕಳ್ಳತನಕ್ಕೆ ಸಂಬಂಧವಿಲ್ಲವೆಂದು ಹೇಳಿಕೊಂಡಿದ್ದಾರೆ. ವಿಜಯಲಕ್ಷ್ಮಿಯ ಫ್ಲ್ಯಾಟ್‌ನಲ್ಲಿ ನಡೆದ ಈ ಕಳ್ಳತನ ಪ್ರಕರಣ ಇದೀಗ ದೊಡ್ಡ ಕುತೂಹಲ ಮೂಡಿಸಿದ್ದು,
ಪೊಲೀಸರು ಸತ್ಯಾಂಶ ಪತ್ತೆಹಚ್ಚಲು ಮುಂದಾಗಿದ್ದಾರೆ. ಇದೀಗ ದೂರುದಾರ ಮ್ಯಾನೇಜರ್ ನಾಗರಾಜು ಹಾಗೂ ವಿಜಯಲಕ್ಷ್ಮಿ ತಾಯಿಯನ್ನೂ ವಿಚಾರಣೆಗೊಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?