ಬೇಲ್ ಸಿಕ್ಕ ಖುಷಿಯಲ್ಲಿರೋ ದರ್ಶನ್’ಗೆ ಮತ್ತೆ ಸಂಕಷ್ಟ ಶುರು! ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಗ್ರೀನ್ ಸಿಗ್ನಲ್

ಡಿಸೆಂಬರ್ 30, 2024 - 12:18
 0  20
ಬೇಲ್ ಸಿಕ್ಕ ಖುಷಿಯಲ್ಲಿರೋ ದರ್ಶನ್’ಗೆ ಮತ್ತೆ ಸಂಕಷ್ಟ ಶುರು! ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಗ್ರೀನ್ ಸಿಗ್ನಲ್

 

 

ರೇಣುಕಾ ಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಸಿನಿಮಾ ಚಿತ್ರೀಕರಣ ಯಾವಾಗ ಪ್ರಾರಂಭ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದೆ. ದರ್ಶನ್ ನಟಿಸುತ್ತಿದ್ದಡೆವಿಲ್ಸಿನಿಮಾದ ಚಿತ್ರೀಕರಣ ಅರ್ಧಕ್ಕೆ ನಿಂತಿದೆಇದರ ಬೆನ್ನಲ್ಲೇ ದರ್ಶನ್ ಗೆ ಈಗ ಹೊಸ ಟೆನ್ಶನ್ ಶುರುವಾಗಿದ್ದು ಮತ್ತೆ ದಾಸ ಚಿಂತಿಸುವ ಹಾಗಾಗಿದೆ.

ಹೌದು ರೇಣುಕಾಸ್ವಾಮಿ ಕೇಸ್​​ನಲ್ಲಿ  ಪೊಲೀಸರು ಸುಪ್ರೀಂ ಕೋರ್ಟ್ ಗೆ  ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆಯಿಂದ ಗ್ರೀನ್ಸಿಗ್ನಲ್ ಸಿಕ್ಕಿದ್ದು, ಇಂದು ತನಿಖಾಧಿಕಾರಿಗಳ ಕೈಗೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವ ಅನುಮತಿ ಪತ್ರ ಸಿಗಲಿದೆ. ಮುಂದಿನ ವಾರದಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಅರ್ಜಿ ಸಲ್ಲಿಸಲು ಸಿದ್ದತೆ ಕೂಡಾ ಮಾಡಲಾಗಿದೆ.

ಬೆನ್ನು ನೋವಿನ ನೆಪ ಹೇಳಿ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್ ಒಂದುವರೇ ತಿಂಗಳಾದ್ರು ಸರ್ಜರಿ ಮಾಡಿಸಿಕೊಂಡಿರಲಿಲ್ಲ. ನಂತರ ರೆಗ್ಯೂಲರ್ ಜಾಮೀನು ಪಡೆದು ಮನೆಗೆ ತೆರಳಿದ್ದ ದರ್ಶನ್ಫಿಸಿಯೋ ಥೆರಪಿ ಮೂಲಕವೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಿನ್ನೆಲೆಯಲ್ಲಿ ಜಾಮೀನು ಅದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಗೆ ಪ್ಲಾನ್ ಮಾಡಿದ್ದ ತನಿಖಾ ತಂಡ ಗೃಹ ಇಲಾಖೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿತ್ತುಈಗಾಗಲೇ ಮೌಖಿಕ ವಾಗಿ ಅನುಮತಿ ಸಿಕ್ಕಿದ್ದು, ಸೋಮವಾರ ಅಧಿಕೃತ ಪತ್ರ ಪೊಲೀಸರ ಕೈ ಸೇರಲಿದೆ.

ಇಂದು ಪರ್ಮಿಷನ್ ಲೇಟರ್ ಕೈಗೆ ಸಿಕ್ಕ ನಂತರ ಒಂದೆರಡು ದಿನದಲ್ಲಿ ಎಸ್ಪಿಪಿ ಪ್ರಸನ್ನ ಕುಮಾರ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow