ಆಸ್ಟ್ರೇಲಿಯಾದಲ್ಲೇ ಕೊನೆಯಾಗುತ್ತಾ ಕೊಹ್ಲಿ ಕರಿಯರ್! ನಿವೃತ್ತಿಯ ಸುಳಿವು ನೀಡಿದ ವಿರಾಟ್!?

ಅಕ್ಟೋಬರ್ 24, 2025 - 09:00
 0  9
ಆಸ್ಟ್ರೇಲಿಯಾದಲ್ಲೇ ಕೊನೆಯಾಗುತ್ತಾ ಕೊಹ್ಲಿ ಕರಿಯರ್! ನಿವೃತ್ತಿಯ ಸುಳಿವು ನೀಡಿದ ವಿರಾಟ್!?

ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾದ ಬಳಿಕ, ಅವರ ನಿವೃತ್ತಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳ ನಡುವೆ ಚರ್ಚೆ ಚುರುಕಾಗಿದೆ.

ಪೆವಿಲಿಯನ್ ಕಡೆ ನಿಧಾನವಾಗಿ ನಡೆದುಕೊಂಡು ಹೋಗುತ್ತಿದ್ದ ಕೊಹ್ಲಿಗೆ ಅಡಿಲೇಡ್ ಪ್ರೇಕ್ಷಕರು ಸ್ಟ್ಯಾಂಡಿಂಗ್ ಓವೇಶನ್ ನೀಡಿ ಗೌರವ ಸೂಚಿಸಿದರು. ಇದೇ ವೇಳೆ ಕೊಹ್ಲಿಯು ಕೈಯಿಂದ "ಥ್ಯಾಂಕ್ ಯೂ" ಎಂಬ ಸನ್ನೆ ನೀಡಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. ಈ ದೃಶ್ಯಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದರಿಂದಾಗಿ “ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಿಂದ ಶೀಘ್ರದಲ್ಲೇ ನಿವೃತ್ತಿ ಘೋಷಿಸಲಿದ್ದಾರೆಯೇ?” ಎಂಬ ಪ್ರಶ್ನೆ ಮತ್ತೊಮ್ಮೆ ಚರ್ಚೆಗೆ ಬಂದಿದೆ.ಇದು ಕೊಹ್ಲಿಯ ಆಸ್ಟ್ರೇಲಿಯಾ ಪ್ರವಾಸದ ಕೊನೆಯ ಏಕದಿನ ಸರಣಿ ಆಗಿರುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

ಮೊದಲೆರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿರುವುದರಿಂದ ಮುಂದಿನ ಸರಣಿಗೆ ಕೊಹ್ಲಿಯನ್ನು ಆಯ್ಕೆ ಮಾಡುವ ಸಾಧ್ಯತೆ ಕ್ಷೀಣಿಸಿರುವುದಾಗಿ ಕ್ರಿಕೆಟ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಆದರೆ, ಬಿಸಿಸಿಐ ಅಥವಾ ವಿರಾಟ್ ಕೊಹ್ಲಿಯವರಿಂದ ಅಧಿಕೃತ ಘೋಷಣೆ ಇನ್ನೂ ಬಂದಿಲ್ಲ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow