ನಾನು ಚಹಲ್ʼಗೆ ಅವಮಾನ ಮಾಡಬಹುದಿತ್ತು, ಆದ್ರೆ ಗಂಡ ಅಂತ ಸುಮ್ನೆ ಇದ್ದೇ; ಧನಶ್ರೀ ಖಡಕ್ ವಾರ್ನಿಂಗ್
ಡ್ಯಾನ್ಸರ್ ಹಾಗೂ ನಟಿ ಧನಶ್ರೀ ವರ್ಮಾ ಮತ್ತು ಕ್ರಿಕೆಟರ್ ಯಜುವೇಂದ್ರ ಚಹಲ್ ನಾಲ್ಕು ವರ್ಷಗಳ ಸಂಸಾರದ ಬಳಿಕ ವಿಚ್ಛೇದನ ಪಡೆದರು. ವಿಚ್ಛೇದನಕ್ಕೆ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ, ಚಹಲ್ ವಿಚ್ಛೇದನದ ಬಳಿಕ ಪರೋಕ್ಷವಾಗಿ ಧನಶ್ರೀ ವಿರುದ್ಧ ಟೀಕೆ ಮಾಡಿದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತು.
ಇತ್ತೀಚೆಗೆ ಅಮೇಜಾನ್ ಎಂಎಕ್ಸ್ ಪ್ಲೇಯರ್ನ ‘ರೈಸ್ ಆ್ಯಂಡ್ ಫಾಲ್’ ಶೋನಲ್ಲಿ ಮಾತನಾಡಿದ ಧನಶ್ರೀ, ಈ ಬಗ್ಗೆ ಮೌನ ಮುರಿದಿದ್ದಾರೆ. “ನಮ್ಮ ನಡುವೆ ಜಗಳವಾದರೂ, ಯಾರಾದರೂ ಸಂಬಂಧ ಕೊನೆಗೊಳಿಸೋಣ ಎಂದರೆ ಅದಕ್ಕೆ ಬದ್ಧವಾಗಿರಬೇಕು. ಮದುವೆಯಾದ ಮೇಲೆ, ಒಬ್ಬರ ಗೌರವ ಮಾತ್ರವಲ್ಲ, ಇನ್ನೊಬ್ಬರ ಗೌರವವೂ ನಮ್ಮ ಕೈಯಲ್ಲಿರುತ್ತದೆ” ಎಂದರು.
ನನಗೂ ಅಗೌರವ ತೋರಿಸಲು, ಅವಮಾನ ಮಾಡಲು ಬರುವಂತಹ ಸಂದರ್ಭಗಳು ಬಂದಿದ್ದವು. ಆದರೆ, ಅವರು ನನ್ನ ಪತಿ ಆಗಿದ್ದರಿಂದ ಅವರಿಗೆ ಗೌರವ ನೀಡಿದ್ದೆ. ಈಗಲೂ ನಾನು ಮದುವೆಯಾದ ವ್ಯಕ್ತಿಯನ್ನು ಗೌರವಿಸುತ್ತೇನೆ” ಎಂದು ಹೇಳಿದ್ದಾರೆ. ಮತ್ತೆ ಪ್ರೀತಿಸಬೇಕು ಎಂಬ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ಧನಶ್ರೀ ಸ್ಪಷ್ಟಪಡಿಸಿದ್ದಾರೆ. ಅವರ ಈ ಹೇಳಿಕೆಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?