ತೆಲಂಗಾಣ ಮುಖ್ಯಮಂತ್ರಿ ವಿರುದ್ದ ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಅರ್ಜಿ ವಜಾ

ಸೆಪ್ಟೆಂಬರ್ 9, 2025 - 18:02
 0  15
ತೆಲಂಗಾಣ ಮುಖ್ಯಮಂತ್ರಿ ವಿರುದ್ದ ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಅರ್ಜಿ ವಜಾ

ನವದೆಹಲಿ:- ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿ ಸಲ್ಲಿಸಿದ್ದ ಮಾನನಷ್ಟ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. 

ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾನನಷ್ಟ ಅರ್ಜಿ ಸಲ್ಲಿಸಿತ್ತು. ಆದರೆ ಸುಪ್ರೀಂ ವಜಾ ಮಾಡಿದೆ. ದೇಶಾದ್ಯಂತ ರಾಜಕೀಯ ಪಕ್ಷಗಳಿಗೆ ಬಲವಾದ ಸಂದೇಶವನ್ನು ನೀಡಿತು. ನ್ಯಾಯಾಂಗವನ್ನು ರಾಜಕೀಯ ಪೈಪೋಟಿಗೆ ಯುದ್ಧಭೂಮಿಯಾಗಿ ಬಳಸದಂತೆ ಎಚ್ಚರಿಕೆ ನೀಡಿತು.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ತಮ್ಮ ತೀರ್ಪಿನಲ್ಲಿ “ರಾಜಕೀಯ ಅಂಕಗಳನ್ನು ಇತ್ಯರ್ಥಪಡಿಸಿಕೊಳ್ಳಲು ಈ ನ್ಯಾಯಾಲಯವನ್ನು ಬಳಸಬೇಡಿ ಎಂದು ನಾವು ಪದೇ ಪದೇ ಹೇಳಿದ್ದೇವೆ. ನೀವು ರಾಜಕಾರಣಿಯಾಗಿದ್ದರೆ, ನೀವು ದಪ್ಪ ಚರ್ಮವನ್ನು ಹೊಂದಿರಬೇಕು” ಎಂದು ಟೀಕಿಸಿದ್ದಾರೆ. ಕಾನೂನು ಪ್ರಕ್ರಿಯೆಗಳ ನೆಪದಲ್ಲಿ ನ್ಯಾಯಾಲಯವನ್ನು ರಾಜಕೀಯ ಚರ್ಚೆಗಳಿಗೆ ಎಳೆಯಲಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow