ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ: ಟೀಮ್ ಇಂಡಿಯಾದಿಂದ ಕಿಕ್ ಔಟ್ ಆಗ್ತಾರಾ ರೋಹಿತ್ ಶರ್ಮಾ!?

ಡಿಸೆಂಬರ್ 10, 2024 - 18:11
 0  11
ಟೆಸ್ಟ್ ನಲ್ಲಿ ಕಳಪೆ ಪ್ರದರ್ಶನ: ಟೀಮ್ ಇಂಡಿಯಾದಿಂದ ಕಿಕ್ ಔಟ್ ಆಗ್ತಾರಾ ರೋಹಿತ್ ಶರ್ಮಾ!?

ಹಿಟ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಶೈಲಿ ಸಂಪೂರ್ಣ ವಿಫಲವಾಗಿದೆ. ವಿಶ್ವಕಪ್ ನಲ್ಲಿ ಮಿಂಚಿದ್ದ ರೋಹಿತ್ ಶರ್ಮಾ ಟೆಸ್ಟ್ ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿದ್ದು, ಟೀಮ್ ಇಂಡಿಯಾದಿಂದ ಕಿಕ್ ಔಟ್ ಆಗ್ತಾರಾ ಎಂಬ ಪ್ರಶ್ನೆ ಎದ್ದಿದೆ. 

ಟಿ20 ವಿಶ್ವಕಪ್​​ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಚುಟುಕು ಮಾದರಿ ಕ್ರಿಕೆಟ್​​ಗೆ ವಿದಾಯ ಹೇಳಿದ್ದರು. ಇದಾಗ್ಯೂ ಹಿಟ್​​ಮ್ಯಾನ್ ಏಕದಿನ ಹಾಗೂ ಟೆಸ್ಟ್​ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದರು. ಇದಕ್ಕೆ ಮುಖ್ಯ ಕಾರಣ ಮುಂಬರುವ ಚಾಂಪಿಯನ್ಸ್ ಟ್ರೋಫಿ ಹಾಗೂ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯ.

ಈ ಎರಡು ಟೂರ್ನಿಗಳ ಬಳಿಕ ರೋಹಿತ್ ಶರ್ಮಾ ಭಾರತ ತಂಡದಿಂದ ಹೊರಬೀಳುವುದು ಬಹುತೇಕ ಖಚಿತ. ಏಕೆಂದರೆ ಮುಂದಿನ ವರ್ಷ ಹಿಟ್​​ಮ್ಯಾನ್ 38ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಅವರನ್ನು ಎರಡು ತಂಡಗಳ ನಾಯಕತ್ವದಿಂದ ಕೆಳಗಿಳಿಸಿ ಹೊಸ ಕ್ಯಾಪ್ಟನ್ ಅನ್ನು ಆಯ್ಕೆ ಮಾಡಲು ಈಗಾಗಲೇ ಬಿಸಿಸಿಐ ಆಯ್ಕೆ ಸಮಿತಿ ಚರ್ಚಿಸಿದೆ.

ಒಂದು ವೇಳೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಸರಣಿ ಸೋತರೆ, ಟೆಸ್ಟ್ ತಂಡದಿಂದ ನಾಯಕತ್ವದಿಂದ ರೋಹಿತ್ ಶರ್ಮಾ ಅವರನ್ನು ಕೆಳಗಿಳಿಸುವುದು ಖಚಿತ. ಏಕೆಂದರೆ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಪಂದ್ಯವನ್ನು ಮುಂದಿಟ್ಟುಕೊಂಡು ಹಿಟ್​​ಮ್ಯಾನ್ ಅವರನ್ನು ಟೆಸ್ಟ್​ನಲ್ಲಿ ನಾಯಕರಾಗಿ ಈವರೆಗೆ ಮುಂದುವರೆಸಲಾಗಿದೆ.

ಅತ್ತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​ಗೆ ಪ್ರವೇಶಿಸುವಲ್ಲಿ ಟೀಮ್ ಇಂಡಿಯಾ ವಿಫಲವಾದರೆ ರೋಹಿತ್ ಶರ್ಮಾ ಅವರ ತಲೆದಂಡವಾಗಲಿದೆ. ಅಲ್ಲದೆ ಜಸ್​​ಪ್ರೀತ್ ಬುಮ್ರಾ ಅಥವಾ ರಿಷಭ್ ಪಂತ್​​ಗೆ ಟೆಸ್ಟ್ ತಂಡದ ನಾಯಕತ್ವ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ.

ಹಾಗೆಯೇ 2025ರ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ತಂಡದಿಂದಲೂ ರೋಹಿತ್ ಶರ್ಮಾ ಹೊರಬೀಳಲಿದ್ದಾರೆ. ಅಲ್ಲದೆ ಏಕದಿನ ತಂಡಕ್ಕೂ ಹೊಸ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಕಾರಣದಿಂದಾಗಿ ಶುಭ್​​ಮನ್ ಗಿಲ್ ಅವರನ್ನು ಏಕದಿನ ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾದಿಂದ ರೋಹಿತ್ ಶರ್ಮಾ ಹೊರಬೀಳುವುದು ಖಚಿತ ಎನ್ನಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow