ಏಕದಿನ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ರನ್ ಸಿಡಿಸಿದ ಸೆಲಂಗೋರ್ U-19 ತಂಡ

ಅಕ್ಟೋಬರ್ 6, 2025 - 12:21
 0  12
ಏಕದಿನ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ರನ್ ಸಿಡಿಸಿದ ಸೆಲಂಗೋರ್ U-19 ತಂಡ

ಮಲೇಶ್ಯಾದ ಅಂಡರ್-19 ಏಕದಿನ ಟೂರ್ನಿಯಲ್ಲಿ ಸೆಲಂಗೋರ್ ಮತ್ತು ಪುತ್ರಜಯ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ದಾಖಲೆಬರೆದ ಘಟನೆ ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ಸೆಲಂಗೋರ್ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 564 ರನ್‌ಗಳನ್ನು ಕಲೆಹಾಕಿತು.

ಪಂದ್ಯದ ಮೊದಲಿನಿಂದಲೇ ಸೆಲಂಗೋರ್ ಬ್ಯಾಟರ್‌ಗಳು ದಾಳಿ ಆರಂಭಿಸಿದರು. ವಿಶೇಷವಾಗಿ ಮುಹಮ್ಮದ್ ಅಕ್ರಮ್ ಕೇವಲ 97 ಎಸೆತಗಳಲ್ಲಿ 217 ರನ್‌ಗಳ ದ್ವಿಶತಕ ಬಾರಿಸಿ ತಂಡದ ದೊಡ್ಡ ಮೊತ್ತಕ್ಕೆ ಕಾರಣರಾದರು

ಭಾರೀ ಗುರಿಯನ್ನು ಬೆನ್ನತ್ತಿದ ಪುತ್ರಜಯ ತಂಡವು ಪ್ರತಿರೋಧ ತೋರುವಲ್ಲಿ ವಿಫಲವಾಯಿತು. ಕೇವಲ 21.5 ಓವರ್‌ಗಳಲ್ಲಿ 87 ರನ್‌ಗಳಿಗೇ ಆಲೌಟ್ ಆಯಿತು.

ಇದರೊಂದಿಗೆ ಸೆಲಂಗೋರ್ ತಂಡವು 477 ರನ್‌ಗಳ ಭರ್ಜರಿ ಜಯ ಸಾಧಿಸಿ ಟೂರ್ನಿಯಲ್ಲಿ ಹೊಸ ದಾಖಲೆ ಬರೆದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow