ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಕಾಂತಾರ: ಚಾಪ್ಟರ್ 1’!! ಒಟ್ಟು ಕಲೆಕ್ಷನ್ ಎಷ್ಟಾಯ್ತು?

ಅಕ್ಟೋಬರ್ 5, 2025 - 16:45
 0  12
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ‘ಕಾಂತಾರ: ಚಾಪ್ಟರ್ 1’!! ಒಟ್ಟು ಕಲೆಕ್ಷನ್ ಎಷ್ಟಾಯ್ತು?

ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಾಯಕನಟನಾಗಿ ನಟಿಸಿರುವ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾದ ತಕ್ಷಣವೇ ಭಾರೀ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರೇಕ್ಷಕರು ಸಿನಿಮಾಗೆ ಫುಲ್ ಮಾರ್ಕ್ಸ್ ನೀಡುತ್ತಿದ್ದು, ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳು ನಡೆಯುತ್ತಿವೆ.

ಅಕ್ಟೋಬರ್ 2ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ₹61.85 ಕೋಟಿ ರೂ. ಗಳಿಸಿದೆ. ಎರಡನೇ ದಿನದಲ್ಲಿ ₹46 ಕೋಟಿ ರೂ. ಕಲೆಕ್ಷನ್ ಆಗಿದ್ದು, ಮೂರನೇ ದಿನದಲ್ಲಿ ಸುಮಾರು ₹55 ಕೋಟಿ ರೂ. ಬಾಚಿಕೊಂಡಿದೆ. ಹೀಗೆ ಮೂರು ದಿನಗಳಲ್ಲೇ ಒಟ್ಟು ₹163 ಕೋಟಿ ರೂ. ದಾಟಿದೆ.

ಭಾನುವಾರದ (ಅಕ್ಟೋಬರ್ 5) ಗಳಿಕೆ ಸೇರಿಕೊಂಡರೆ ಸಿನಿಮಾ ಸುಲಭವಾಗಿ ₹200 ಕೋಟಿ ಕ್ಲಬ್ ಸೇರುವ ಸಾಧ್ಯತೆ ಇದೆ. 7 ಭಾಷೆಗಳಲ್ಲಿ ಬಿಡುಗಡೆಯಾದ ಈ ಚಿತ್ರವು 2025ರ ಕನ್ನಡ ಸಿನಿ ಕ್ಷೇತ್ರದ ಅತಿ ದೊಡ್ಡ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow