ಕರ್ನಾಟಕದ ಬ್ಯಾಂಕ್ ನಲ್ಲಿದೆ ಹಲವು ಉದ್ಯೋಗ: ಆಸಕ್ತರು ಲೇಟ್ ಮಾಡ್ಬೇಡಿ, ಇಂದೇ ಅಪ್ಲೈ ಮಾಡಿ!

ಡಿಸೆಂಬರ್ 10, 2024 - 08:29
 0  16
ಕರ್ನಾಟಕದ ಬ್ಯಾಂಕ್ ನಲ್ಲಿದೆ ಹಲವು ಉದ್ಯೋಗ: ಆಸಕ್ತರು ಲೇಟ್ ಮಾಡ್ಬೇಡಿ, ಇಂದೇ ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಬ್ಯಾಂಕ್ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ, ಮುಂಬೈ, ಮೈಸೂರು, ಪುಣೆ, ಶಿವಮೊಗ್ಗ, ಮಂಗಳೂರು, ಕಲಬುರಗಿ, ಧಾರವಾಡ/ಹುಬ್ಬಳ್ಳಿ, ನವದೆಹಲಿ ಇಲ್ಲಿಯ ಕಚೇರಿಗಳಲ್ಲಿ ಆನ್​ಲೈನ್ ಟೆಸ್ಟ್​ಗಳನ್ನ ನಡೆಸಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಆನ್​ಲೈನ್​ ಟೆಸ್ಟ್​​ನಲ್ಲಿ ಪಾಸ್ ಅಭ್ಯರ್ಥಿಗಳನ್ನು ಸಂದರ್ಶನಕ್ಕಾಗಿ ಮಂಗಳೂರು ಅಥವಾ ಬೇರೆ ಕಚೇರಿಗೆ ಆಹ್ವಾನಿಸಲಾಗುತ್ತದೆ.

ಸಾಮಾನ್ಯ ಪರೀಕ್ಷೆಯಲ್ಲಿ ಕಂಪ್ಯೂಟರ್​ಗೆ ಸಂಬಂಧಿಸಿದ ಪ್ರಶ್ನೆಗಳು, ಇಂಗ್ಲಿಷ್ ಭಾಷೆ, ಬ್ಯಾಂಕಿಂಗ್, ಕರೆಂಟ್ ಅಫೈರ್ಸ್, ತಾರ್ಕಿಕ, ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್, ಇಂಗ್ಲಿಷ್​​ನಲ್ಲಿ ಪ್ರಬಂಧ ಸೇರಿ ಒಟ್ಟು 150 ನಿಮಿಷದಲ್ಲಿ 202 ಪ್ರಶ್ನೆಗಳಿಗೆ 225 ಅಂಕಗಳಿಗೆ ಆನ್​ಲೈನ್ ಟೆಸ್ಟ್ ಇರುತ್ತದೆ.

ವೇತನ ಶ್ರೇಣಿ
48,480 ದಿಂದ 85,920 ರೂಪಾಯಿಗಳು

ಉದ್ಯೋಗದ ಹೆಸರು- ಪ್ರೊಬೇಷನರಿ ಅಧಿಕಾರಿಗಳು 

ವಯೋಮಿತಿ
28 ವರ್ಷದ ಒಳಗಿನ ಅಭ್ಯರ್ಥಿಗಳು
ಎಸ್​​ಸಿ, ಎಸ್​ಟಿ- 5 ವರ್ಷಗಳ ಸಡಿಲಿಕೆ ಇದೆ

ಶೈಕ್ಷಣಿಕ ಅರ್ಹತೆ

ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ
ಕೃಷಿ ವಿಜ್ಞಾನದಲ್ಲಿ ಪದವಿ
ಕಾನೂನು ಪದವಿ (5 ವರ್ಷ)
ಸಿಎ, ಸಿಎಸ್, ಸಿಎಂಎಸ್, ಐಸಿಡಬ್ಲುಎ

ಕೊನೆ ದಿನಾಂಕ

ಅರ್ಜಿ ಸಲ್ಲಿಕೆಯ ಕೊನೆ ದಿನ- 10 ಡಿಸೆಂಬರ್ 2024

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow