ರಾತ್ರಿ ನಾಯಿ ಅತ್ತರೆ ಮನೆಯಲ್ಲಿ ಸಾವಾಗುತ್ತಾ!? ಇದರ ಹಿಂದಿನ ಸತ್ಯ ನೀವು ತಿಳಿಯಲೇಬೇಕು!

ಡಿಸೆಂಬರ್ 10, 2024 - 07:19
 0  15
ರಾತ್ರಿ ನಾಯಿ ಅತ್ತರೆ ಮನೆಯಲ್ಲಿ ಸಾವಾಗುತ್ತಾ!? ಇದರ ಹಿಂದಿನ ಸತ್ಯ ನೀವು ತಿಳಿಯಲೇಬೇಕು!

ಹಿಂದೂ ಧರ್ಮದಲ್ಲಿ ಅನೇಕ ಪ್ರಾಣಿಗಳನ್ನು ನೋಡುವುದು ನಮ್ಮ ಮುಂಬರುವ ಜೀವನಕ್ಕೆ ಕೆಲವು ಶುಭ ಮತ್ತು ಅಶುಭ ಫಲಗಳನ್ನು ನೀಡುತ್ತದೆ.ದಾರಿಯಲ್ಲಿ ಹೋಗುವಾಗ ಬೆಕ್ಕು ಅಡ್ಡ ದಾಟಿದರೆ, ಅದನ್ನು ಅಪಶಕುನ ಎನ್ನಲಾಗುತ್ತೆ. ಬೆಕ್ಕು ದಾಟಿದ ಮಾರ್ಗದಲ್ಲಿ ಸ್ವಲ್ಪ ಸಮಯದವರೆಗೆ ಹೋಗಬಾರದು ಎಂದು ನಂಬಲಾಗಿದೆ.

ಅದರಂತೆ ನಾಯಿ ಅತ್ತರೆ ಮನೆಯಲ್ಲಿ ಸಾವಾಗುತ್ತೆ. ಹೀಗೆಲ್ಲಾ ಹಿಂದಿನಿಂದಲೂ ನಂಬಲಾಗಿದೆ.  ಪ್ರಾಣಿ - ಪಕ್ಷಿಗಳ ಪ್ರತಿಯೊಂದು ಚಟುವಟಿಕೆಗಳು ನಮ್ಮ ಜೀವನದಲ್ಲಿ ನಡೆಯುವ ಅನೇಕ ಘಟನೆಗಳೊಂದಿಗೆ ಸಂಬಂಧ ಹೊಂದಿರುತ್ತದೆ ಎಂದು ಶಕುನ ಶಾಸ್ತ್ರ ಹೇಳುತ್ತದೆ. ನಾಯಿಗಳು ಕೂಡ ನಮ್ಮ ಜೀವನದಲ್ಲಿ ನಡೆಯುವ ಶುಭ ಮತ್ತು ಅಶುಭ ಘಟನೆಗಳನ್ನು ಸೂಚಿಸುತ್ತವೆಯಂತೆ

ನಾಯಿಯು ಭೈರವನ ಅವತಾರ ಅಥವಾ ದ್ವಾರದ ರಕ್ಷಕ ದೇವತೆ ಎಂದು ನಂಬಲಾಗಿದೆ. ಹೆಚ್ಚಿನ ಜನರು ತಮ್ಮ ಮನೆಯಲ್ಲಿ ನಾಯಿಯನ್ನು ಸಾಕು ಇಷ್ಟಪಡುತ್ತಾರೆ. ರಾತ್ರಿ ಹೊತ್ತು ನಾಯಿ ಅಳುತ್ತಿದ್ದರೆ, ದೊಡ್ಡವರು ಅದನ್ನು ಓಡಿಸುವುದನ್ನು ನೀವು ಅನೇಕ ಬಾರಿ ನೋಡಿದ್ದೀರಿ. ರಾತ್ರಿಯಲ್ಲಿ ನಾಯಿಗಳು ಕೂಗುವುದು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. 

ನಿಮ್ಮ ಮನೆಯ ಹೊರಗೆ ಅಥವಾ ಬಾಗಿಲಲ್ಲಿ ನಾಯಿ ಬೊಗಳಿದರೆ, ಇದು ಕೆಲವು ರೋಗಗಳನ್ನು ಸೂಚಿಸುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಾದರೂ ದೊಡ್ಡ ಅನಾರೋಗ್ಯದಿಂದ ಬಳಲುತ್ತಾರೆ ಅಂತ ಅರ್ಥ. ರಾತ್ರಿಯಲ್ಲಿ ನಾಯಿ ಅಳುತ್ತಿದ್ದರೆ, ಅದು ಕೆಲವು ದೊಡ್ಡ ದುರದೃಷ್ಟವನ್ನು ಸೂಚಿಸುತ್ತದೆ. ಹಾಗಾಗಿ ನಾಯಿ ಮನೆಯ ಹೊರಗೆ ಅಳಬಾರದು.

ನಾಯಿಗಳು ಅಳುವುದು ಆರ್ಥಿಕ ನಷ್ಟಕ್ಕೆ ಮುನ್ಸೂಚನೆ. ಮುಂದೆ ಕೆಲವು ಕೆಲಸಗಳಿಂದ ನಷ್ಟವಾಗುವ ಸಂಭವ. ಮನೆಯ ಹೊರಗೆ ನಾಯಿ ಅಳುತ್ತಿದ್ದರೆ ನೀವು ಮುಂದಿನ ದಿನಗಳಲ್ಲಿ ಕೆಲವು ಕೆಟ್ಟ ಸುದ್ದಿಗಳನ್ನು ಕೇಳುವ ಸಾಧ್ಯತೆಯಿದೆ. ನಿಮ್ಮ ಮನೆಯ ಸುತ್ತ ನೆಗೆಟಿವ್ ಎನರ್ಜಿ ಇದ್ದರೆ.. ನಾಯಿಗಳು ಅದನ್ನು ಗ್ರಹಿಸಿ ಬೊಗಳುತ್ತವೆ.


ನಾಯಿಗಳು ಸನ್ನಿಹಿತವಾದ ನೈಸರ್ಗಿಕ ಘಟನೆಗಳನ್ನು ಮುಂಚಿತವಾಗಿ ಗ್ರಹಿಸುತ್ತವೆ ಎಂದು ಹೇಳಲಾಗುತ್ತದೆ. ಭೂಕಂಪ ಇತ್ಯಾದಿ ಪ್ರಕೃತಿ ವಿಕೋಪ ಸಂಭವಿಸುವ ಮುನ್ನ ನಾಯಿಗಳು ಕೂಗಲು ಪ್ರಾರಂಭಿಸುತ್ತವೆ. ಕೆಲವು ನಂಬಿಕೆಗಳ ಪ್ರಕಾರ, ನಾಯಿಗಳು ತಮ್ಮ ಸುತ್ತಲೂ ಕೆಲವು ದುಷ್ಟ ಶಕ್ತಿಗಳು ಇದ್ದಾಗ ಹೆಚ್ಚು ಕೂಗುತ್ತವೆ ಎಂದು ಹೇಳಲಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow