ಪ್ರೇಯಸಿಯ ಒತ್ತಡಕ್ಕೆ ಪತ್ನಿಯನ್ನೇ ಕೊಲೆಗೈದ ಬಿಜೆಪಿ ನಾಯಕ..!
ಅಜ್ಮೀರ್: ಬಿಜೆಪಿ ನಾಯಕ ರೋಹಿತ್ ಸೈನಿ ಪ್ರೇಯಸಿ ರಿತು ಸೈನಿಯ ಒತ್ತಡದಿಂದ ಪತ್ನಿ ಸಂಜು ಅವರನ್ನು ಕೊಲೆಮಾಡಿದ ಘಟನೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಬೆಳಕಿಗೆ ಬಂದಿದೆ. ಆಗಸ್ಟ್ 10ರಂದು ನಡೆದ ಈ ಪ್ರಕರಣವನ್ನು ಆರಂಭದಲ್ಲಿ ದರೋಡೆ ಎಂದು ಬಿಂಬಿಸಲಾಗಿತ್ತು, ಆದರೆ ಪೊಲೀಸರು 24 ಗಂಟೆಗಳ ಒಳಗೆ ಸತ್ಯ ಬಹಿರಂಗಪಡಿಸಿದರು.
ಮೂಲಗಳ ಪ್ರಕಾರ, ರೋಹಿತ್ ಸೈನಿ ತನ್ನ ಮೊದಲ ಹೇಳಿಕೆಯಲ್ಲಿ “ದರೋಡೆಕೋರರು ಪತ್ನಿಯನ್ನು ಕೊಂದು ಆಭರಣ-ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ” ಎಂದು ದೂರಿದ್ದರು. ಆದರೆ ತನಿಖೆ ವೇಳೆ ಸತ್ಯ ಬಯಲಾಗಿದ್ದು, ರೋಹಿತ್ ಸ್ವತಃ ಪತ್ನಿಯನ್ನು ಹತ್ಯೆಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರೋಹಿತ್ ಮತ್ತು ರಿತು ಹಲವು ವರ್ಷಗಳಿಂದ ಸಂಬಂಧದಲ್ಲಿದ್ದರು. ಪತ್ನಿ ಸಂಜು ಅವರಿಬ್ಬರ ನಡುವಿನ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಕಾರಣ, ರೋಹಿತ್ ಅವರನ್ನು ಜೀವನದಿಂದ ದೂರ ಮಾಡಲು ರಿತು ಒತ್ತಡ ಹೇರಿದ್ದಳು. ಇದರ ಪರಿಣಾಮವಾಗಿ ಪೂರ್ವಯೋಜಿತವಾಗಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ, ರೋಹಿತ್ ಸೈನಿ ಹಾಗೂ ರಿತು ಸೈನಿಯನ್ನು ಬಂಧಿಸಿ ಜೈಲು ಸೇರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?