ಚಾಣಕ್ಯರ ಪ್ರಕಾರ ಈ 5 ಸ್ಥಳಗಳಿಗೆ ಎಂದಿಗೂ ಕಾಲಿಡಬೇಡಿ!

ಅಕ್ಟೋಬರ್ 21, 2025 - 06:59
 0  20
ಚಾಣಕ್ಯರ ಪ್ರಕಾರ ಈ 5 ಸ್ಥಳಗಳಿಗೆ ಎಂದಿಗೂ ಕಾಲಿಡಬೇಡಿ!

ಯಾವುದೇ ಸ್ಥಳದಲ್ಲಿ ವಾಸಿಸುವ ಮುನ್ನ ಅಥವಾ ಹೊಸ ಸ್ಥಳಕ್ಕೆ ತೆರಳುವ ಮುನ್ನ ಆ ಸ್ಥಳ ನಮಗೆ ಅನುಕೂಲಕರವೇ ಎಂಬುದನ್ನು ಎಚ್ಚರಿಕೆಯಿಂದ ಆಲೋಚಿಸಬೇಕು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ಹೇಳಿದ್ದಾರೆ. ಯಶಸ್ವಿ, ಗೌರವಯುತ ಜೀವನ ಬಯಸುವವರು ಕೆಲ ಸ್ಥಳಗಳನ್ನು ತಪ್ಪಿಸಲು ಅವರು ಸ್ಪಷ್ಟ ಎಚ್ಚರಿಸಿದ್ದಾರೆ.

ಇವು ಚಾಣಕ್ಯರ ಪ್ರಕಾರ ದೂರವಿರಬೇಕಾದ ಐದು ಸ್ಥಳಗಳು:

  1. ಗೌರವ ಸಿಗದ ಸ್ಥಳ:
    ಒಬ್ಬ ವ್ಯಕ್ತಿಯ ಪರಿಶ್ರಮಕ್ಕೆ ಗೌರವ ಸಿಗದ ಸ್ಥಳದಲ್ಲಿ ಉಳಿಯಬಾರದು. ಅಂತಹ ಸ್ಥಳಗಳಲ್ಲಿ ಇರೋದರಿಂದ ಆತ್ಮವಿಶ್ವಾಸ ಕುಸಿಯುತ್ತದೆ ಮತ್ತು ವ್ಯಕ್ತಿಯ ಗೌರವ ಹಾಳಾಗುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

  2. ಶಿಕ್ಷಣಕ್ಕೆ ಆದ್ಯತೆ ಇಲ್ಲದ ಸ್ಥಳ:
    ಜ್ಞಾನವೇ ಅತ್ಯಂತ ದೊಡ್ಡ ಸಂಪತ್ತು. ಶಿಕ್ಷಣಕ್ಕೆ ಬೆಲೆ ಕೊಡದ ವಾತಾವರಣದಲ್ಲಿ ವಾಸಿಸುವುದರಿಂದ ಪ್ರಗತಿ ಅಸಾಧ್ಯ. ಚಾಣಕ್ಯರ ಪ್ರಕಾರ, ಅಂಥ ಸ್ಥಳಗಳಲ್ಲಿ ಜೀವನ ಬೆಳಗುವುದಿಲ್ಲ, ಕತ್ತಲೆ ಆವರಿಸುತ್ತದೆ.

  3. ಉದ್ಯೋಗಾವಕಾಶಗಳಿಲ್ಲದ ಸ್ಥಳ:
    ಜೀವನೋಪಾಯ ಮತ್ತು ವೃತ್ತಿ ಅಭಿವೃದ್ಧಿಗೆ ಅವಕಾಶಗಳಿರುವ ಸ್ಥಳದಲ್ಲೇ ವಾಸಿಸಬೇಕು. ಉದ್ಯೋಗಾವಕಾಶಗಳಿಲ್ಲದ ಕಡೆ ಬಡತನ ಮತ್ತು ಅಸಮಾಧಾನ ಅನಿವಾರ್ಯ.

  4. ಕೆಟ್ಟ ಜನರ ಸಹವಾಸ ಇರುವ ಸ್ಥಳ:
    ಒಬ್ಬ ವ್ಯಕ್ತಿಯ ಗುಣ ಮತ್ತು ಪ್ರಗತಿ ಅವನ ಸಹವಾಸದಿಂದಲೇ ನಿರ್ಧರಿಸುತ್ತದೆ. ಕೆಟ್ಟವರ ಸಹವಾಸದಲ್ಲಿ ಇರುವವರು ತಪ್ಪದೇ ಕೆಟ್ಟ ಮಾರ್ಗದತ್ತ ತಳ್ಳಲ್ಪಡುತ್ತಾರೆ. ಆದ್ದರಿಂದ ಕೆಟ್ಟ ಸಂಸ್ಕಾರದ ಜನರಿರುವ ಸ್ಥಳಗಳಿಂದ ದೂರವಿರಬೇಕು.

  5. ನಕಾರಾತ್ಮಕತೆ ತುಂಬಿರುವ ಸ್ಥಳ:
    ನಕಾರಾತ್ಮಕ ಚಿಂತನೆಗಳು, ಅಸಹಕಾರದ ವಾತಾವರಣ ಮತ್ತು ದುಃಖದ ಶಕ್ತಿ ತುಂಬಿರುವ ಸ್ಥಳಗಳು ವ್ಯಕ್ತಿಯ ಜೀವನ ಶಕ್ತಿ ಕುಗ್ಗಿಸುತ್ತವೆ. ಅಂತಹ ಸ್ಥಳಗಳಲ್ಲಿ ವಾಸಿಸಬಾರದು ಎಂದು ಚಾಣಕ್ಯರು ಸ್ಪಷ್ಟವಾಗಿ ಹೇಳಿದ್ದಾರೆ.

ಚಾಣಕ್ಯರ ಪ್ರಕಾರ, ಗೌರವ, ಜ್ಞಾನ, ಉದ್ಯೋಗ ಮತ್ತು ಒಳ್ಳೆಯ ಜನರ ಸಹವಾಸ ಇರುವ ಸ್ಥಳದಲ್ಲಿ ವಾಸಿಸಿದರೆ ವ್ಯಕ್ತಿಯ ಜೀವನ ಯಶಸ್ವಿ ಮತ್ತು ಸಂತೃಪ್ತಿಯಿಂದ ಕೂಡಿರುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow