ಹೆಬ್ಬಾಳ ಫ್ಲೈಓವರ್ ಲೋಕಾರ್ಪಣೆ ಮಾಡಿದ CM, DCM: ಟ್ರಾಫಿಕ್ ಕಿರಿಕಿರಿಗೆ ಬಿತ್ತು ಬ್ರೇಕ್ !
ಬೆಂಗಳೂರು: ಬಹುನಿರೀಕ್ಷಿತ ಹೆಬ್ಬಾಳ ವಿಸ್ತರಿತ ಮೇಲ್ಸೇತುವೆ ಇಂದು ಲೋಕಾರ್ಪಣೆಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಸ ಫ್ಲೈಓವರ್ಗೆ ಹಸಿರು ನಿಶಾನೆ ತೋರಿದರು.
ಕೆ.ಆರ್. ಪುರಂನಿಂದ ಮೇಖ್ರಿ ಸರ್ಕಲ್ ಕಡೆ ಸಂಪರ್ಕ ಕಲ್ಪಿಸುವ 700 ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಸುಮಾರು 94 ಕೋಟಿ ರೂ. ವೆಚ್ಚವಾಗಿದೆ. ಈ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜಾರಿಗೊಳಿಸಿದ್ದು, ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 31 ತಿಂಗಳು ತೆಗೆದುಕೊಂಡಿದೆ.
ಕಾರ್ಯಕ್ರಮದಲ್ಲಿ ಸಚಿವರು ಭೈರತಿ ಸುರೇಶ್, ಕೃಷ್ಣಭೈರೇಗೌಡ, ಶಾಸಕರು ಎಸ್.ಆರ್. ವಿಶ್ವನಾಥ್, ಹ್ಯಾರಿಸ್, ನಟಿ ರಮ್ಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜಧಾನಿ ಟ್ರಾಫಿಕ್ ಎಂದರೆ ಹೆಬ್ಬಾಳ ಜಾಮ್ ನೆನಪಾಗುತ್ತಿತ್ತು. ಇದೀಗ ಈ ಹೊಸ ಮೇಲ್ಸೇತುವೆಯ ಉದ್ಘಾಟನೆಯಿಂದ ಹೆಬ್ಬಾಳ ಟ್ರಾಫಿಕ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?