ಕರ್ನೂಲ್ ಬಸ್ ದುರಂತ: ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಾವು
ಹೈದರಾಬಾದ್ನಿಂದ ಬೆಂಗಳೂರಿಗೆ ಹೊರಟಿದ್ದ ವೋಲ್ವೊ ಬಸ್ ಹೊತ್ತಿ ಉರಿದಿದ್ದು, 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬಸ್ ಮೊದಲು ಬೈಕ್ಗೆ ಡಿಕ್ಕಿ ಹೊಡೆದಿದೆ, ಡಿಕ್ಕಿ ಹೊಡೆದ ಬಳಿಕ ಅಲ್ಲೇ ಬಸ್ ನಿಂತಿದ್ದರೆ ಇಷ್ಟೊಂದು ಅನಾಹುತ ಸಂಭವಿಸುತ್ತಿರಲಿಲ್ಲ, ಬಸ್ ನಿಲ್ಲಿಸದೆ ಮುಂದಕ್ಕೆ ಹೋದ ಪರಿಣಾಮ ಬೈಕ್ ಬಸ್ ಅಡಿಯಲ್ಲಿ ಸಿಲುಕಿತ್ತು. ಬೈಕ್ ನೆಲಕ್ಕೆ ಉಜ್ಜಿದ ಪರಿಣಾಮ ಅದರಿಂದ ಬೆಂಕಿ ಹೊತ್ತಿಕೊಂಡಿತ್ತು.
ಇನ್ನೂ ಈ ಘಟನೆಯಲ್ಲಿ ನೆಲ್ಲೂರು ಜಿಲ್ಲೆಯ ಗೊಲ್ಲವರಿಪಳ್ಳಿಯ ಒಂದು ಕುಟುಂಬದ ನಾಲ್ವರು ಮಂದಿ ಮೃತಪಟ್ಟಿದ್ದಾರೆ. ಅವರು ಗೊಲ್ಲ ರಮೇಶ್ (35), ಅನುಷಾ (30), ಮಾನಿಶ್ (12), ಮಾನ್ವಿತ (10) ಎಂದು ಗುರುತಿಸಲಾಗಿದೆ. ಬೆಂಗಳೂರು ಮೂಲದ ಸರಸ್ವತಿ ಮತ್ತು ಹಾರಿಕಾ ಎಂಬುವವರು ಪ್ರಾಣಾಪಾಯದಿಂದ ತಪ್ಪಿಸಿಕೊಂಡಿದ್ದಾರೆ. ಡಿಐಜಿ ಪ್ರವೀಣ್ ಮಾಹಿತಿ ನೀಡಿರುವಂತೆ, ಬಸ್‌ನಲ್ಲಿ ಒಟ್ಟು 41 ಮಂದಿ ಇದ್ದರು. 19 ಮಂದಿ ಸುರಕ್ಷಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಕಿ ತಗುಲಿದಾಗ ಪ್ರಯಾಣಿಕರು ನಿದ್ರೆಯಲ್ಲಿದ್ದರಿಂದ ಹಾನಿ ಹೆಚ್ಚಾಗಿದೆ. ಕೆಲವರು ತುರ್ತು ಬಾಗಿಲನ್ನು ಮುರಿದು ಹೊರಬಂದರು, ಇನ್ನೂ ಕೆಲವರನ್ನು ರಕ್ಷಣೆ ಮಾಡಲಾಯ್ತು. ಸುಮಾರು 19 ಮಂದಿ ಸುರಕ್ಷಿತವಾಗಿದ್ದಾರೆ, ಅವರಲ್ಲಿ ಹಲವರು ಕರ್ನೂಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ 20ಕ್ಕೂ ಹೆಚ್ಚು ಮಂದಿ ಬೆಂಕಿಯಲ್ಲಿ ಸಿಲುಕಿ ಮೃತಪಪಟ್ಟಿದ್ದಾರೆ. 11 ಶವಗಳನ್ನು ಈಗಾಗಲೇ ಪತ್ತೆ ಮಾಡಲಾಗಿದ್ದು, ಗುರುತು ಸ್ಥಾಪನೆಯ ಕಾರ್ಯ ನಡೆಯುತ್ತಿದೆ. ಚಾಲಕ ಶಿವನಾರಾಯಣ ಮತ್ತು ಲಕ್ಷ್ಮಯ್ಯ ಎಂದು ತಿಳಿದುಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?