ಕಂಠಪೂರ್ತಿ ಕುಡಿದ ಮೇಲೆ ರೋಡೆ ನಮ್ಮನೆ: ಪೋಷಕರೇ, ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕಳಿಸೋ ಮುನ್ನ ಹುಷಾರ್!

ಬೆಂಗಳೂರು:- ಎಣ್ಣೆನೂ ಸೋಡಾನೂ ಎಂಥಾ ಒಳ್ಳೆ ಫ್ರೆಂಡು ಒಂದನ್ನೊಂದು ಬಿಟ್ಟು ಎಂದು ಇರೋದಿಲ್ಲ... ವೀಕ್ಷಕರೇ ಈ ಹಾಡು ಇಲ್ಲಿ ಯಾಕ್ ಹಾಕಿದ್ದಾರೆ ಅಂತ ಯೋಚ್ನೆ ಮಾಡ್ದೆ ಈ ಸುದ್ದಿ ನೋಡಿ.
ಎಸ್, ಇದು ಕುಡಿತದ ದಾಸರಾಗಿರುವ ಶಾಲಾ ವಾಹನಗಳ ಡ್ರೈವರ್ ಗಳ ಕಥೆ. ಶಾಲಾ ವಾಹನಗಳಲ್ಲಿ ನಿಮ್ಮ ಮಕ್ಕಳನ್ನು ಕಳಿಸುವ ಮುನ್ನ ಎಚ್ಚರವಿರಲಿ. ಯಾಕಂದ್ರೆ ಬೆಳ್ಳಂಬೆಳಿಗ್ಗೆ ಕಂಠಪೂರ್ತಿ ಕುಡಿದು ಸ್ಕೂಲ್ ವ್ಯಾನ್‌ಗಳನ್ನು ಓಡಿಸುತ್ತಿದ್ದಾರೆ. ಇಂತಹ ಘಟನೆಯೊಂದು ಆರ್‌ಆರ್ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಶಾಲೆಗಳು ಶುರುವಾದ ಹಿನ್ನೆಲೆ ಸಂಚಾರಿ ಪೊಲೀಸರು ಶಾಲಾ ವಾಹನಗಳ ಮೇಲೆ ಕಣ್ಣಿಟ್ಟಿದ್ದು, ಡ್ರೈವರ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಳ್ಳಂಬೆಳಿಗ್ಗೆ ಸಂಚಾರಿ ಪೊಲೀಸರು ಶಾಲಾ ವಾಹನ ಚಾಲಕನೊಬ್ಬನ ಡಿಡಿ ಚೆಕ್ ಮಾಡಿದ್ದು, ರೀಡಿಂಗ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.
ಕಂಠಪೂರ್ತಿ ಕುಡಿದು ವಾಹನ ಚಲಾಯಿಸುತ್ತಿರುವುದು ತಿಳಿದುಬಂದಿದ್ದು, ಇದೇ ಅವಸ್ಥೆಯಲ್ಲಿಯೇ ಹಲವು ಕಡೆ ವಾಹನ ಚಾಲನೆ ಮಾಡಿಕೊಂಡು ಬಂದಿರುವುದಾಗಿ ಪತ್ತೆಯಾಗಿದೆ. ಒಟ್ಟು 4,559 ಶಾಲಾ ವಾಹನಗಳ ಪರಿಶೀಲನೆ ಮಾಡಲಾಗಿದ್ದು, 59 ಚಾಲಕರು ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿರುವುದು ಬೆಳಕಿಗೆ ಬಂದಿದೆ. ಸದ್ಯ 59 ವಾಹನ ಚಾಲಕರ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಪೊಲೀಸರು ಬೇಜವಾಬ್ದಾರಿಯಿಂದಿದ್ದ ಶಾಲೆಗಳಿಗೂ ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






