ನಿಮ್ಮಲ್ಲಿ ಈ ಸಮಸ್ಯೆಗಳಿದ್ಯಾ? ದಿನಕ್ಕೊಂದು ಗೆಣಸು ತಿನ್ನಿ, ಆಮೇಲೆ ಮ್ಯಾಜಿಕ್ ನೋಡಿ!

ಜೂನ್ 23, 2025 - 07:01
 0  18
ನಿಮ್ಮಲ್ಲಿ ಈ ಸಮಸ್ಯೆಗಳಿದ್ಯಾ? ದಿನಕ್ಕೊಂದು ಗೆಣಸು ತಿನ್ನಿ, ಆಮೇಲೆ ಮ್ಯಾಜಿಕ್ ನೋಡಿ!

 

ಗೆಣಸು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ತರಕಾರಿ. ಈ ಗಡ್ಡೆಯನ್ನು ಬೇಯಿಸಿಕೊಂಡು ತಿನ್ನಬಹುದು, ಪಲ್ಯ ಮಾಡಬಹುದು, ಸಾಂಬಾರ್ ಮಾಡಬಹುದು, ಬೋಂಡ ಕೂಡ ಮಾಡಿಕೊಂಡು ತಿನ್ನಬಹುದು.

ಅತಿಹೆಚ್ಚು ಪೋಷಕಾಂಶಗಳು: ಗೆಣಸು ತಿನ್ನುವುದರಿಂದ ನಮ್ಮ ದೇಹಕ್ಕೆ ವಿಟಮಿನ್ ಎ, ಸಿ ರೀತಿಯ ಪೋಷಕಾಂಶಗಳು ದೊರೆಯುತ್ತವೆ. ವಿಟಲ್ ಬಿ ವಿಟಮಿನ್​ ಅದರ ಜೊತೆಗೆ ಸಾಕಷ್ಟು ಖನಿಜಾಂಶಗಳಿಂದ ಈ ಆಹಾರ ತುಂಬಿದೆ. ಇದರಲ್ಲಿ ನಮಗೆ ಅತಿಹೆಚ್ಚು ಪೋಟ್ಯಾಶಿಯಂ ದೊರಕುತ್ತದೆ.

ಆ್ಯಂಟಿಆಕ್ಸಿಡಂಟ್​​ ಅಂಶಗಳು: ಉಳಿದ ಆಹಾರಗಳಿಗಿಂತ ಹೆಚ್ಚು ಆ್ಯಂಟಿಆಕ್ಸಿಡೆಂಟ್​ಗಳು ನಮಗೆ ಗೆಣಸಿನಲ್ಲಿ ಸಿಗುತ್ತವೆ. ಬೆಟಾ ಕೊರೊಟೆನ್​ನಂತಹ ಅಂಶಗಳು ಇದರಲ್ಲಿ ಸಿಗುವುದರಿಂದ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಗೆಣಸು ಪ್ರಮುಖ ಪಾತ್ರವಹಿಸುತ್ತದೆ ಹಾಗೂ ಮಾರಕ ಕಾಯಿಲೆಗಳಿಂದ ಕಾಪಾಡುತ್ತದೆ.

ಜೀರ್ಣಕ್ರಿಯೆಗೆ ಸಹಾಯಕ: ಗೆಣಸಿನಲ್ಲಿ ಅತಿಹೆಚ್ಚು ಫೈಬರ್​ ಅಂಶ ಹೆಚ್ಚು ಇರುವುದರಿಂದ ಇದು ಜೀರ್ಣಕ್ರಿಯನ್ನು ಸುಲಭಗೊಳಿಸುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದರಿಂದ ಮಲಬದ್ಧತೆಯಂತ ಸಮಸ್ಯೆಗಳಿಂದ ದೂರ ಇರಬಹುದು.

ರೋಗ ನಿರೋಧಕ ಶಕ್ತಿ: ಗೆಣಸಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಈಗಾಗಲೇ ಹೇಳಿದಂತೆ ವಿಟಮಿನ್ ಎ ಅಂಶ ಇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಸೋಂಕುಗಳೊಂದಿಗೆ ಸಮರ್ಥವಾಗಿ ಹೋರಾಡುವ ಶಕ್ತಿಯನ್ನು ದೇಹಕ್ಕೆ ನೀಡುತ್ತೆ.

ತೂಕ ನಿರ್ವಹಣೆ: ತೂಕ ನಿರ್ವಹಣೆಗೆ ಗೆಣಸು ಹೇಳು ಮಾಡಿಸಿದ ಆಹಾರ. ತೂಕ ನಿರ್ವಹಣೆ ಮಾಡಿಕೊಳ್ಳಬೇಕು ಎನ್ನುವವರು ಗೆಣಸಿನ ಮೊರೆ ಹೋಗಬಹದು.

ದೃಷ್ಟಿ ಆರೋಗ್ಯವನ್ನು ವೃದ್ಧಿಸುತ್ತದೆ: ಗೆಣಸಿನಲ್ಲಿ ಅತಿಹೆಚ್ಚು ಬೆಟಾ ಕ್ಯಾರೊಟೆನ್​ ಇರುವುದರಿಂದ ಹಾಗೂ ವಿಟಮಿನ್ ಎ ಅಂಶ ಇರುವುದಿರರಿಂದ ಇದು ದೇಹಕ್ಕೆ ಹಾಗೂ ನಮ್ಮ ದೃಷ್ಟಿ ಸಾಮರ್ಥ್ಯಕ್ಕೆ ಶಕ್ತಿತುಂಬುತ್ತದೆ. ಹಾಗೂ ಕುರುಡುತನ ನಮ್ಮತ್ತ ಹಾಯದಂತೆ ಕಾಪಾಡುತ್ತದೆ.

               

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow