ಸಿದ್ದರಾಮಯ್ಯ ಸೇರಿದಂತೆ ಯಾವ ಸಿಎಂ ಕೂಡ ನನ್ನ ಬಂಧಿಸುವಂತೆ ಹೇಳಿಲ್ಲ: ಜಿ.ಟಿ.ದೇವೇಗೌಡ

ಸಿದ್ದರಾಮಯ್ಯ ಸೇರಿದಂತೆ ಯಾವ ಸಿಎಂ ಕೂಡ ನನ್ನ ಬಂಧಿಸುವಂತೆ ಹೇಳಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳಲು ರಾಜಕೀಯ ಮಾಡಿದ್ದಾರೆ. ಆದರೆ ಬಂಧಿಸುವಂತಹ ರೀತಿ ವರ್ತಿಸಿಲ್ಲ. ರೇವಣ್ಣ ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ಅವರು ಸಿಗುತ್ತಾರೆ. ಅವತ್ತೇ ಅವರ ಬಳಿ ಕೇಳಿ ಹೇಳುತ್ತೇನೆ. ನನ್ನ ವಿರುದ್ಧ ಯಾರೂ ಬಂಧಿಸುವಂತಹ ಸೇಡಿನ ರಾಜಕಾರಣ ಮಾಡಿಲ್ಲ. ನಾನು ಕೂಡ ಆ ರೀತಿ ನಡೆದುಕೊಂಡಿಲ್ಲ ಎಂದು ತಿಳಿಸಿದರು.
ರಾಜ್ಯ ಗೃಹ ಮಂಡಳಿ ಅಧ್ಯಕ್ಷನಾಗಿದ್ದಾಗ ಜೆಡಿಎಸ್ – ಕಾಂಗ್ರೆಸ್ ಇಬ್ಬರು ಸೇರಿ ಅದರಲ್ಲಿ ಅವ್ಯವಹಾರ ಆಗಿದೆ ಎಂದು ತನಿಖೆ ಮಾಡಿಸಿದ್ದರು ಅಷ್ಟೆ. ನಾನು ಇದುವರೆಗೆ ಯಾರಿಂದಲೂ ನನ್ನ ರಕ್ಷಣೆ ಮಾಡಿ ಎಂದು ದೂರವಾಣಿ ಕರೆ ಮಾಡಿಸಿಲ್ಲ. ಕುಮಾರಸ್ವಾಮಿಯಿಂದ ನಾನು ಯಾವುದೇ ಕರೆ ಮಾಡಿಸಿ ನನ್ನ ರಕ್ಷಣೆ ಮಾಡಿಸಿಕೊಂಡಿಲ್ಲ. ನಾನು ನನ್ನ ಮಗ ಬಂಧನವಾಗುವಂತಹ ಯಾವ ಅಪರಾಧವೂ ಮಾಡಿಲ್ಲ ಟಾಂಗ್ ಕೊಟ್ಟರು.
ನಿಮ್ಮ ಪ್ರತಿಕ್ರಿಯೆ ಏನು?






