ನೀವು ಪೂಜೆ ಮಾಡುವಾಗ ಈ ತಪ್ಪು ಮಾಡುತ್ತಿದ್ದರೆ ಇಂದೇ ಬಿಟ್ಟುಬಿಡಿ! ಇಲ್ಲದಿದ್ರೆ ಫಲ ಸಿಗಲ್ಲ!

ಸನಾತನ ಧರ್ಮದಲ್ಲಿ, ಪೂಜೆ ಮತ್ತು ಮಂತ್ರಗಳ ಪಠಣವು ಅತ್ಯಂತ ಮಹತ್ವದ್ದಾಗಿದೆ. ಪ್ರತಿದಿನ ಭಕ್ತಿಯಿಂದ ದೇವರನ್ನು ಪೂಜಿಸುವುದರಿಂದ ಭಕ್ತರಿಗೆ ಸಮೃದ್ಧಿ ಮತ್ತು ಸಂಪತ್ತು ಸಿಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಪೂಜಾ ಸಮಾರಂಭವನ್ನು ದೇವರಿಗೆ ಭಕ್ತಿಯನ್ನು ತೋರಿಸುವ ಮಾಧ್ಯಮವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಪೂಜೆ ಮಾಡುವುದರಿಂದ ಕುಟುಂಬ ಸದಸ್ಯರು ಆರೋಗ್ಯವಾಗಿ ಮತ್ತು ಸಂಪತ್ತನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ.
ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ರತೀ ಮನೆಯಲ್ಲೂ ಪೂಜೆ ಮಾಡುವ ಪದ್ಧತಿಯಿದೆ. ಯಾವುದೇ ದೇವತೆಯನ್ನು ಅಥವಾ ದೇವರನ್ನು ಪೂಜಿಸುವುದರಿಂದ, ಕುಟುಂಬದಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ನೆಲೆಯಾಗುತ್ತದೆ ಹಾಗೂ ಜೀವನದಲ್ಲಿ ಐಶ್ವರ್ಯವೂ ಬರುತ್ತದೆ. ದೇವರ ಆಶೀರ್ವಾದ ಪಡೆಯಲು ಎಲ್ಲಾ ಭಕ್ತರು ವಿಧಿವಿಧಾನದಂತೆ ಪೂಜೆ ಸಲ್ಲಿಸುತ್ತಾರೆ. ಆದಾಗ್ಯೂ, ನೀವು ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ನಿಯಮಗಳೊಂದಿಗೆ ಪೂಜೆಯನ್ನು ಮಾಡಿದಾಗ ಮಾತ್ರ ನಿಮ್ಮ ಪೂಜೆಯ ಪುಣ್ಯ ಫಲವನ್ನು ನೀವು ಪಡೆದುಕೊಳ್ಳುತ್ತೀರಿ.
ಸಾಮಾನ್ಯವಾಗಿ ಜನರು ತಮಗೆ ಬಿಡುವಾದಾಗ ಪೂಜೆಯನ್ನು ಮಾಡುತ್ತಾರೆ. ಹಾಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಪೂಜೆಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ, ಅದನ್ನು ನಾವು ಜೀವನದಲ್ಲಿ ಅನುಸರಿಸುವುದು ಅವಶ್ಯಕ. ಈ ಲೇಖನದಲ್ಲಿ ನಾವು ಪೂಜೆಗೆ ಸಂಬಂಧಿಸಿದ ಕೆಲವು ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ. ಅವುಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಪುಣ್ಯ ಫಲವನ್ನು ಪಡೆದುಕೊಳ್ಳಬಹುದು. ಆ ನಿಯಮಗಳು ಯಾವುವು..?
1. ಪೂಜೆಗೆ ಸೂಕ್ತ ಸಮಯ ಯಾವುದು.?
ಧಾರ್ಮಿಕ ನಂಬಿಕೆಗಳ ಪ್ರಕಾರ, ದೇವರ ಪೂಜೆಯನ್ನು ಮಾಡುವಾಗ ಸಮಯವನ್ನು ನೋಡಿಕೊಂಡು ಸರಿಯಾದ ಸಮಯದಲ್ಲಿ ಪೂಜೆಯನ್ನು ಮಾಡಬೇಕು. ಹೀಗೆ ಮಾಡುವುದರಿಂದ ಪೂಜೆ ಯಶಸ್ವಿಯಾಗುತ್ತದೆ ಮತ್ತು ಆ ಪೂಜೆಯ ಪೂರ್ಣ ಫಲ ಲಭಿಸುತ್ತದೆ. ಪ್ರತಿದಿನ 5 ಬಾರಿ ಪೂಜೆಯನ್ನು ಮಾಡಬೇಕು. ಮುಂಜಾನೆ 04:30 ರಿಂದ 5:00 ರವರೆಗೆ ಮೊದಲ ಪೂಜೆ ಇದು ಬ್ರಹ್ಮ ಮುಹೂರ್ತದ ಪೂಜೆಯೆಂದು ಪರಿಗಣಿಸಲಾಗುತ್ತದೆ. ನಂತರ ಬೆಳಿಗ್ಗೆ 09:00 ರಿಂದ ಎರಡನೇ ಪೂಜೆ, ಮಧ್ಯಾಹ್ನ 12:00 ರಿಂದ ಮಧ್ಯಾಹ್ನ ಪೂಜೆ, ಸಂಜೆ 04:30 ರಿಂದ ಸಂಜೆ ಪೂಜೆ, ಸಂಜೆ 6:00 ರಿಂದ ಶಯನ ಪೂಜೆ ಆರಂಭವಾಗಿ ರಾತ್ರಿ 9:00 ರವರೆಗೆ ಪೂಜೆ ನಡೆಯುತ್ತದೆ.
2. ಯಾವ ಸಮುಯದಲ್ಲಿ ದೇವರ ಪೂಜೆ ಮಾಡಬಾರದು.?
ಧರ್ಮಗ್ರಂಥಗಳ ಪ್ರಕಾರ, ಒಬ್ಬ ವ್ಯಕ್ತಿಯು ಮಧ್ಯಾಹ್ನದ ಸಮಯದಲ್ಲಿ ದೇವರ ಪೂಜೆಯನ್ನು ಮಾಡಬಾರದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ದೇವರ ಪೂಜೆಯನ್ನು ಮಾಡಬಾರದು. ಈ ಸಮಯದಲ್ಲಿ ಪೂಜೆ ಮಾಡುವುದರಿಂದ ಯಾವುದೇ ಫಲ ನಿಮಗೆ ದೊರೆಯುವುದಿಲ್ಲ ಎನ್ನುವ ನಂಬಿಕೆಯಿದೆ.
3. ದೇವರ ಪೂಜೆಯನ್ನು ಮಾಡುವುದು ಹೇಗೆ.?
ಪೂಜೆಯ ಸಮಯದಲ್ಲಿ, ಯಾವಾಗಲೂ ನಿಮ್ಮ ಮುಖವನ್ನು ಪೂರ್ವ ಅಥವಾ ಉತ್ತರದ ಕಡೆಗೆ ಇಟ್ಟುಕೊಳ್ಳಬೇಕು. ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ದೇವರ ಪೂಜೆಯನ್ನು ಮಾಡುವುದರಿಂದ ಅದು ನಿಮ್ಮ ಮನೆಯಲ್ಲಿ ಸುಖ ಮತ್ತು ಸಂತೋಷ ನೆಲೆಯಾಗುವಂತೆ ಮಾಡುತ್ತದೆ. ದೇವರ ಆಶೀರ್ವಾದವು ನಿಮ್ಮ ಮೇಲಿರುತ್ತದೆ. ದೇವರ ಪೂಜೆಯನ್ನು ಮಾಡಲು ನೀವು ಕುಳಿತುಕೊಂಡಾಗ ನಿಮ್ಮ ಬಲಭಾಗದಲ್ಲಿ ನೀವು ಗಂಟೆ, ಧೂಪ, ದೀಪ ಮತ್ತು ಇನ್ನಿತರ ಪೂಜೆ ಸಾಮಾಗ್ರಿಗಳನ್ನು ಇಟ್ಟುಕೊಳ್ಳಬೇಕು. ಪೂಜೆ ಮಾಡುವಾಗ ನಿಮ್ಮ ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು ಪೂಜೆ ಮಾಡಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದು ನೀವು ದೇವರಿಗೆ ಎಷ್ಟು ಗೌರವವನ್ನು ನೀಡುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ
ದೇವರ ಪೂಜೆಯನ್ನು ನಿತ್ಯವೂ ಮಾಡುತ್ತೇವೆ. ಈ ಸಮಯದಲ್ಲಿ ನಾವು ತಿಳಿದೋ ಅಥವಾ ತಿಳಿಯದೆಯೋ ಕೆಲವೊಂದು ತಪ್ಪುಗಳನ್ನೂ ಮಾಡುತ್ತೇವೆ. ಒಂದು ವೇಳೆ ನೀವು ಪೂಜೆಯ ಸಮಯದಲ್ಲಿ ಈ ಮೇಲಿನ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಅದನ್ನು ಮಾಡುವುದನ್ನು ತಪ್ಪಿಸಿ.
ನಿಮ್ಮ ಪ್ರತಿಕ್ರಿಯೆ ಏನು?






