ನೀವು ಮಲಗಲು ಶ್ರೇಷ್ಠಾ ದಿಕ್ಕು ಇದು, ತಪ್ಪದೇ ಈ ವಾಸ್ತು ಫಾಲೋ ಮಾಡಿ!

ಡಿಸೆಂಬರ್ 24, 2024 - 07:02
 0  13
ನೀವು ಮಲಗಲು ಶ್ರೇಷ್ಠಾ ದಿಕ್ಕು ಇದು, ತಪ್ಪದೇ ಈ ವಾಸ್ತು ಫಾಲೋ ಮಾಡಿ!

ವಾಸ್ತು ಪ್ರಕಾರ ಮನೆ ಯಾವ ದಿಕ್ಕಿನಲ್ಲಿ ಇರುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಮುಖ್ಯವಾಗಿ ಪೂರ್ವ ಹಾಗೂ ಉತ್ತರ ದಿಕ್ಕಿನಲ್ಲಿ ಇದ್ದರೆ ಒಳ್ಳೆಯದು ಎನ್ನಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಮನೆ ಇದ್ದರೆ ಅನೇಕ ಪ್ರಯೋಜನಗಳು ಸಿಗುತ್ತದೆ. ಇದು ಧನಾತ್ಮಕ ಶಕ್ತಿಯ ಹರಿವನ್ನು ಉತ್ತೇಜಿಸುತ್ತದೆ. ಉತ್ತರಾಭಿಮುಖವಾದ ಮನೆಯನ್ನು ಆದರ್ಶ ವಾಸ್ತು ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಉತ್ತರವು ಸಂಪತ್ತಿನ ದಿಕ್ಕು ಆಗಿರುವುದರಿಂದ, ಉತ್ತರಾಭಿಮುಖವಾಗಿರುವ ಮನೆಯು ಆರ್ಥಿಕ ಬೆಳವಣಿಗೆಗೆ ಬಂದಾಗ ಪ್ರಯೋಜನಕಾರಿ ಎನ್ನಲಾಗುತ್ತದೆ.

ಅದರಂತೆ ವಾಸ್ತು ಪ್ರಕಾರ, ಮಲಗುವ ದಿಕ್ಕು ಕೂಡ ಬಹಳ ಮುಖ್ಯ. ಸರಿಯಾದ ದಿಕ್ಕಿನಲ್ಲಿ ತಲೆಹಾಕಿ ಮಲಗುವುದರಿಂದ ನೆಮ್ಮದಿ ನಿದ್ರೆ, ಆರೋಗ್ಯ ವೃದ್ಧಿ ಆಗುವಂತೆಯೇ, ತಪ್ಪಾದ ದಿಕ್ಕಿನಲ್ಲಿ ತಲೆಯಿಟ್ಟು ಮಲಗಿದರೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. 

ವಾಸ್ತು ಪ್ರಕಾರ, ಪೂರ್ವ ದಿಕ್ಕಿನಲ್ಲಿ ತಲೆ ಹಾಕಿ ಮಲಗುವುದು ಶುಭ. ಇದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಆರೋಗ್ಯವೂ ಸುಧಾರಿಸುತ್ತದೆ. ಪಶ್ಚಿಮ ದಿಕ್ಕಿನಲ್ಲಿ ತಲೆ ಹಾಕಿ ಮಲಗಿದರೆ ಜೀವನದಲ್ಲಿ ಅಶಾಂತಿ ಹೆಚ್ಚಾಗಿ ಬದುಕು ನೆಮ್ಮದಿ ಇಲ್ಲದಂತಾಗುತ್ತದೆ.

ಈಶಾನ್ಯ ದಿಕ್ಕಿನಲ್ಲಿ ತಲೆಯಿಟ್ಟು ಮಲಗುವುದರಿಂದ ಸಾಲ, ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ. ಶಾಂತಿಯಿಂದ ನಿದ್ರೆ ಮಾಡಲು ದಕ್ಷಿಣ ದಿಕ್ಕು ಅತ್ಯಂತ ಶ್ರೇಷ್ಟವಾದ ದಿಕ್ಕು. ಈ ದಿಕ್ಕಿಗೆ ತಲೆ ಹಾಕು ಮಲಗುವುದರಿಂದ ಜೀವನದಲ್ಲಿ ಶಾಂತಿ, ಕೀರ್ತಿ, ಯಶಸ್ಸು ಸಿಗಲಿದೆ. 

ವಾಸ್ತು ಪ್ರಕಾರ, ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿನಲ್ಲಿ ತಲೆ ಹಾಕಿ ಮಲಗಬಾರದು. ಇದರಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸುವುದರ ಜೊತೆಗೆ ಆಯುಷ್ಯವೂ ಕಡಿಮೆಯಾಗುತ್ತದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow