ನೀವ್ ಅವಕಾಶ ಕೊಟ್ರೆ ಬಿಗ್ ಮನೆಗೆ ಹೋಗ್ತೀನಿ: ಕಿಚ್ಚನ ಮುಂದೆ ಗೋಲ್ಡ್ ಸುರೇಶ್ ಬೇಡಿಕೆ!

ಬಿಗ್ ಬಾಸ್ ಸೀಸನ್ 11 ಬಹಳ ಕುತೂಹಲಕಾರಿಯಾಗಿ ಮೂಡಿ ಬರುತ್ತಿದ್ದು, ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕಳೆದ ವಾರ ಕುಟುಂಬದ ತುರ್ತು ಕಾರಣಗಳಿಂದ ಬಿಗ್ ಮನೆಯಿಂದ ಹೊರ ನಡೆದಿದ್ದ ಗೋಲ್ಡ್ ಸುರೇಶ್ ಅವರು, ವೇದಿಕೆಗೆ ದಿಢೀರ್ ಎಂಟ್ರಿ ಕೊಟ್ಟಿದ್ದರು. ಈ ವೇಳೆ ಕಿಚ್ಚನ ಬಳಿ ವಿಶೇಷ ಮನವಿ ಮಾಡಿದ್ದಾರೆ.
ಮನೆ ಒಳಗೆ ಹೋಗಬೇಕಾಗುವಾಗ ನನ್ನ ಸಂಸ್ಥೆ ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಇತ್ತು. ನನ್ನ ಪತ್ನಿ ಹಾಗೂ ತಂಡದವರನ್ನು ನಂಬಿ ನನ್ನ ಕಂಪನಿ ಕೊಟ್ಟು ಹೋದೆ. ಗೆಳೆಯರು ಇದನ್ನು ತುಂಬಾ ಮಿಸ್ಯೂಸ್ ಮಾಡಿಕೊಂಡರು. ಯಾವಾಗ ಕಷ್ಟ ಆಗುತ್ತದೆ ಎಂದಾಗ ನನ್ನನ್ನು ಕರೆಯಿರಿ ಎಂದು ಹೇಳಿದ್ದೆ. ಅವರಿಗೆ ಆಗದ್ದೇ ಇದ್ದಾಗ ನನ್ನನ್ನು ಕರೆದರು. ನಾನು ಬಂದು ನನ್ನ ಕಂಟ್ರೋಲ್ಗೆ ತೆಗೆದುಕೊಂಡೆ’ ಎಂದಿದ್ದಾರೆ ಅವರು.
ಮತ್ತೊಮ್ಮೆ ಸುರೇಶ್ ಅವರು ಬಿಗ್ ಬಾಸ್ ಮನೆ ಒಳಗೆ ಹೋಗೋಕೆ ಅವಕಾಶ ಕೇಳಿದ್ದಾರೆ. ಇದಕ್ಕೆ ಸುದೀಪ್ ನೋ ಎಂದಿದ್ದಾರೆ. ‘ಚೈತ್ರಾನ ಒಂದು ದಿನ ಹೊರಕ್ಕೆ ಬಿಟ್ಟು ಅಲ್ಲಿ ಅವರ ಕಂಟ್ರೋಲ್ ಮಾಡೋಕೆ ಸಾಧ್ಯವಾಗುತ್ತಿಲ್ಲ. ಇನ್ನು ನೀವು ಇಡೀ ಪ್ರಪಂಚ ನೋಡಿ ಬಂದವರು. ನಿಮ್ಮನ್ನು ಒಳಕ್ಕೆ ಬಿಟ್ಟರೆ ಅಷ್ಟೇ’ ಎಂದಿದ್ದಾರೆ ಅವರು.
ನಿಮ್ಮ ಪ್ರತಿಕ್ರಿಯೆ ಏನು?






