ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ! ಅರ್ಹರು ಇಂದೇ ಅಪ್ಲೈ ಮಾಡಿ!

ಡಿಸೆಂಬರ್ 24, 2024 - 07:59
 0  5
ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ! ಅರ್ಹರು ಇಂದೇ ಅಪ್ಲೈ ಮಾಡಿ!

ಭಾರತೀಯ ಕೋಸ್ಟ್ ಗಾರ್ಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹರು ಇಂದೇ ಅಪ್ಲೈ ಮಾಡಬಹುದು. 

ಉದ್ಯೋಗಕ್ಕೆ ಅಪ್ಲೇ ಮಾಡಲು ನಾಳೆಯೇ ಕೊನೆಯ ದಿನವಾಗಿದ್ದರಿಂದ ಅಭ್ಯರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಬೇಕು. ಭಾರತೀಯ ಕೋಸ್ಟ್ ಗಾರ್ಡ್​ನ ಅಧಿಕೃತ ವೆಬ್‌ಸೈಟ್ https://joinindiancoastguard.cdac.in/ ನಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಆಫ್​ಲೈನ್ ಅರ್ಜಿಗೆ ಅನುಮತಿ ಇರುವುದಿಲ್ಲ. ಈ ಕೆಲಸಗಳಿಗೆ ಸಂಬಂಧಿಸಿದಂತೆ ಕೊನೆಯ ದಿನಾಂಕ, ಆಯ್ಕೆ ಪ್ರಕ್ರಿಯೆ, ಮುಂದಿನ ಅಪ್​ಡೇಟ್ಸ್​, ಅರ್ಜಿ ಶುಲ್ಕದ ಮಾಹಿತಿ ಸೇರಿ ಎಲ್ಲವೂ ಈ ಆರ್ಟಿಕಲ್​​ನಲ್ಲಿದೆ. ಭಾರತೀಯ ಕೋಸ್ಟ್ ಗಾರ್ಡ್​ ಜನರಲ್ ಡ್ಯೂಟಿ (ಜಿಡಿ) ಹಾಗೂ ತಾಂತ್ರಿಕ (ಎಂಜಿನಿಯರಿಂಗ್ ಮತ್ತು ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್) ಸೇರಿದಂತೆ ವಿವಿಧ ಶಾಖೆಗಳಲ್ಲಿ ನೇಮಕಾತಿ ಮಾಡುತ್ತಿದೆ.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ- 24 ಡಿಸೆಂಬರ್ 2024

ಉದ್ಯೋಗದ ಹೆಸರು, ಎಷ್ಟು ಹುದ್ದೆಗಳು-

ಜನರಲ್ ಡ್ಯುಟಿ (ಜಿಡಿ)- 110 ಉದ್ಯೋಗಗಳು
ತಾಂತ್ರಿಕ (ಇಂಜಿನಿಯರ್)- 30 ಹುದ್ದೆಗಳು
ಸಹಾಯಕ ಕಮಾಂಡೆಂಟ್‌ ಹುದ್ದೆಗಳು ಒಟ್ಟು- 140

ಅರ್ಜಿ ಶುಲ್ಕ ಎಷ್ಟು?

ಜನರಲ್, ಒಬಿಸಿ, ಇಡಬ್ಲುಎಸ್- 300 ರೂಪಾಯಿಗಳು
ಎಸ್​ಸಿ, ಎಸ್​ಟಿ, ವಿಶೇಷ ಚೇತನರು- ವಿನಾಯಿತಿ ಇದೆ
ಆನ್​​ಲೈನ್ ಮೂಲಕ ಹಣ ಪಾವತಿ ಮಾಡಬೇಕು
ವಿದ್ಯಾರ್ಹತೆ-
ಜನರಲ್ ಡ್ಯುಟಿ (ಜಿಡಿ)- ದ್ವಿತೀಯ ಪಿಯುಸಿ (ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನ ಮಾಡಿರಬೇಕು)
ತಾಂತ್ರಿಕ (ಇಂಜಿನಿಯರ್)- ತಾಂತ್ರಿಕ ಶಾಖೆ (ಎಂಜಿನಿಯರಿಂಗ್/ಎಲೆಕ್ಟ್ರಿಕಲ್):

ವಯಸ್ಸಿನ ಮಿತಿ-
21 ರಿಂದ 25 ವರ್ಷದ ಒಳಗಿನವರಿಗೆ ಅವಕಾಶ
(01 ಜುಲೈ 2000 ದಿಂದ 30 ಜೂನ್ 2004ರ ಒಳಗೆ ಜನಿಸಿರಬೇಕು)

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow