ಸರ್ಕಾರಿ JOB ಸರ್ಚ್ ಮಾಡ್ತಿದ್ದೀರಾ!? ಬೆಂಗಳೂರಿನಲ್ಲಿ ಉದ್ಯೋಗ ಖಾಲಿ ಇದೆ, ನೇಮಕಾತಿ ಡೀಟೈಲ್ಸ್ ಇಲ್ಲಿದೆ!

ನವೆಂಬರ್ 24, 2024 - 08:42
 0  11
ಸರ್ಕಾರಿ JOB ಸರ್ಚ್ ಮಾಡ್ತಿದ್ದೀರಾ!? ಬೆಂಗಳೂರಿನಲ್ಲಿ  ಉದ್ಯೋಗ ಖಾಲಿ ಇದೆ, ನೇಮಕಾತಿ ಡೀಟೈಲ್ಸ್ ಇಲ್ಲಿದೆ!

ಸರ್ಕಾರಿ JOB ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ರಾಜಧಾನಿ ಬೆಂಗಳೂರಿನಲ್ಲಿದೆ ಉದ್ಯೋಗವಕಾಶ. ಅರ್ಹರು ಕೂಡಲೇ ಅಪ್ಲೈ ಮಾಡಿ. 

ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಇದರಲ್ಲಿ ನಿಮಗೆ ಕೆಲಸ ಸಿಕ್ಕರೆ ನೀವು ರಾಜ್ಯ ರಾಜಧಾನಿ ಬೆಂಳೂರಿನಲ್ಲಿ ಉದ್ಯೊಗ ಮಾಡಬಹುದಾಗಿದೆ. 

KHPT ತನ್ನಲ್ಲಿ ಖಾಲಿ ಇರುವ ಒಂದು ಡಾಕ್ಯುಮೆಂಟೇಶನ್‌ ಸ್ಪೆಷಲಿಸ್ಟ್‌ ಹುದ್ದೆ ಭರ್ತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಆನ್‌ಲೈನ್ ಮೂಲಕ ಡಿಸೆಂಬರ್ 5ರೊಳಗೆ ಅರ್ಜಿಸಲ್ಲಿಸಬೇಕು. ಮಾಸಿಕ ವೇತನ, ಶೈಕ್ಷಣಿಕ ಅರ್ಹತೆ ಸೇರಿದಂತೆ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಒಮ್ಮೆ ಅಧಿಸೂಚನೆ ಸಹ ಓದಿಕೊಳ್ಳಬಹುದು.

ನೇಮಕಾತಿ ಪ್ರಕ್ರಿಯೆ ಹೇಗಿರಲಿದೆ
ನೇಮಕಾತಿ ಸಂಸ್ಥೆ: ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ (KHPT)

ಉದ್ಯೋಗ ಹೆಸರು: ಡಾಕ್ಯುಮೆಂಟೇಶನ್‌ ಸ್ಪೆಷಲಿಸ್ಟ್‌(ದಾಖಲೆ ತಜ್ಞ)

ಒಟ್ಟು ಹುದ್ದೆಗಳು : ಒಂದು

ಪೋಸ್ಟಿಂಗ್: ಬೆಂಗಳೂರು

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 05

ವಿದ್ಯಾರ್ಹತೆ ವಿವರ
ಈ ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಲ್ಲಿ ಕಮ್ಯುನಿಕೇಶನ್ಸ್, ಜರ್ನಲಿಸಂ, ವೆಬ್‌/ ಗ್ರಾಫಿಕ್‌ ಡಿಸೈನ್‌ನಲ್ಲಿ ಪದವಿ ಪಡೆದಿರುವುದು ಕಡ್ಡಾಯವಾಗಿದೆ ಎಂದು ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ನೇಮಕಾತಿ ಅಧಿಸೂಚನೆ ತಿಳಿಸಿದೆ.

ವಯೋಮಿತಿ ಮಾಹಿತಿ
ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಸದರಿ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂದು ನಿಗದಿಮಾಡಿಲ್ಲ. ಜಾತಿ ಮೀಸಲಾತಿಗೆ ಅನುಗುಣವಾಗಿ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳಿಗೆ ಕರ್ನಾಟಕ ಆರೋಗ್ಯ ಪ್ರಚಾರ ಟ್ರಸ್ಟ್ ಮೊದಲು ಲಿಖಿತ ಪರೀಕ್ಷೆ ನಡೆಸುತ್ತದೆ. ಅದರಲ್ಲಿ ಆಯ್ಕೆ ಆಗುವವರಿಗೆ ನೇರ ಸಂದರ್ಶನ ನಡೆಸಲಿದೆ. ಅಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡುತ್ತಿದೆ. ನಿಯಮಾನು ಸಾರ ವೇತನ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ವಿಶೇಷ ಸೂಚನೆ ಎಂದರೆ ಯಾವ ಜಾತಿ, ವರ್ಗದ ಅಭ್ಯರ್ಥಿಗಳಿಗೂ ಅರ್ಜಿ ಸಲ್ಲಿಕೆಗೆ ಶುಲ್ಕ ನಿಗದಿಮಾಡಲಾಗಿಲ್ಲ. ನಿಗದಿ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.

ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಅಧಿಸೂಚನೆ ಡೌನ್‌ಲೋಡ್‌ಗೆ ಇತರ ಮಾಹಿತಿಗೆ ಇಲ್ಲಿ ನೀಡಲಾದ ಅಧಿಕೃತ ವೆಬ್‌ಸೈಟ್‌ ಲಿಂಕ್ ಮೇಲೆ https://www.khpt.org/work-with-us/vacancies-form/?post_applied_for=38859 ಕ್ಲಿಕ್ ಮಾಡಬೇಕು. ನೆನಪಿಡಿ ಡಿಸೆಂಬರ್ 05 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow