10th, ITI, PUC ಪಾಸಾದವರಿಗೆ ಗುಡ್ ನ್ಯೂಸ್: 600ಕ್ಕೂ ಅಧಿಕ ಸರ್ಕಾರಿ ಉದ್ಯೋಗ ಖಾಲಿ!

10th, ITI, PUC ಪಾಸಾದವರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 600ಕ್ಕೂ ಅಧಿಕ ಸರ್ಕಾರಿ ಉದ್ಯೋಗ ಖಾಲಿ ಇದೆ ಎನ್ನಲಾಗಿದೆ.
ತನ್ನಲ್ಲಿ ಖಾಲಿ ಇರುವ ಗ್ರೂಪ್- C ಹುದ್ದೆಗಳ ಭರ್ತಿಗೆ ಡೈರೆಕ್ಟರೇಟ್ ಜನರಲ್ ಎಲೆಕ್ಟ್ರಾನಿಕ್ಸ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್ಸ್ ಅರ್ಜಿ ಆಹ್ವಾನಿಸಿದೆ. 600ಕ್ಕೂ ಅಧಿಕ ಉದ್ಯೋಗಗಳನ್ನು ತುಂಬಲಾಗುತ್ತಿರುವ ಕಾರಣ ಆಕಾಂಕ್ಷಿಗಳು ಹೆಚ್ಚಿನ ಮಟ್ಟದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಆರಂಭದ ದಿನಾಂಕದಿಂದ 21 ದಿನಗಳ ಒಳಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು. ಇಲಾಖೆಯ ವೆಬ್ಸೈಟ್ನಿಂದ ಅರ್ಜಿ ಫಾರ್ಮ್ ಅನ್ನು ಡೌನ್ಲೋಡ್ ಮಾಡಬಹುದು. ಲಿಂಕ್ ಅನ್ನು ಈ ಲೇಖನದಲ್ಲಿ ನೀಡಲಾಗಿದೆ.
ರಕ್ಷಣಾ ಸಚಿವಾಲಯದಡಿ ಈ ಉದ್ಯೋಗಗಳು ಇರುತ್ತವೆ. ಆಸಕ್ತ ಅರ್ಜಿದಾರರು ಶೈಕ್ಷಣಿಕ ಅರ್ಹತೆಗಳು, ವಯಸ್ಸಿನ ಮಿತಿ, ಮಾನದಂಡಗಳು ಹಾಗೂ ಈ ಹುದ್ದೆಗಳಿಗೆ ಸಂಬಂಧಿಸಿದ ಇತರ ವಿವರ ಇಲ್ಲಿ ನೀಡಲಾಗಿದೆ.
ತಿಂಗಳ ಸಂಬಳ
18,000 ದಿಂದ 81,000 ರೂಪಾಯಿ
ಒಟ್ಟು ಉದ್ಯೋಗಗಳು- 625
ಆಯ್ಕೆ ಪ್ರಕ್ರಿಯೆಗಳು
ಲಿಖಿತ ಪರೀಕ್ಷೆ
ದೈಹಿಕ ಪರೀಕ್ಷೆ
ಕೌಶಲ್ಯ ಟೆಸ್ಟ್ (skill)
ವ್ಯಾಪಾರ ಪರೀಕ್ಷೆ (trade tests)
ದಾಖಲಾತಿ ಪರಿಶೀಲನೆ
ವಯೋಮಿತಿ
18 ರಿಂದ 30 ವರ್ಷದ ಒಳಗಿನವರಿಗೆ ಅವಕಾಶ
ವಿದ್ಯಾರ್ಹತೆ (ಹುದ್ದೆಗಳಿಗೆ ತಕ್ಕಂತೆ ಕೇಳಲಾಗಿದೆ)
ಪಿಯುಸಿ- ಡಿಪ್ಲೋಮಾ ಇನ್ ಫಾರ್ಮಾಸಿ
ಪಿಯುಸಿ- ಐಟಿಐ ಸರ್ಟಿಫಿಕೆಟ್
ಪಿಯುಸಿ- ಐಟಿಐ ಮೋಟಾರ್ ಮೆಕ್ಯಾನಿಕ್ ಟ್ರೇಡ್
ಪಿಯುಸಿ ಪಾಸ್ ಆಗಿದ್ದು ಹಿಂದಿ, ಇಂಗ್ಲಿಷ್ ಟೈಪಿಂಗ್
ಮೆಟ್ರಿಕ್ಯುಲೇಷನ್ (10ನೇ ತರಗತಿ ಪಾಸ್)
ಐಟಿಐ ಪಾಸ್ ಆಗಿರಬೇಕು
ನಿಮ್ಮ ಪ್ರತಿಕ್ರಿಯೆ ಏನು?






