ಪತಿ ಜೊತೆ ಗೌತಮಿ: ಹನುಮಂತು, ಧನರಾಜ್ ಇಣುಕಿ ನೋಡಿದ್ದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು..?
ಬಿಗ್ ಬಾಸ್’ ಸೀಸನ್ 11 97 ದಿನಗಳು ಪೂರೈಸಿದೆ. 2024ರಲ್ಲಿ ಸೆ.29ರಂದು ‘ಬಿಗ್ ಬಾಸ್ ಕನ್ನಡ 11’ಕ್ಕೆ ಅದ್ಧೂರಿ ಚಾಲನೆ ನೀಡಲಾಗಿತ್ತು. 17 ಸ್ಪರ್ಧಿಗಳು ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದರು. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಪ್ರಸ್ತುತ 9 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇದೀಗ ಕೆಲ ದಿನಗಳ ಹಿಂದೆ ಬಿಗ್ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದರು. ಈ ವೇಳೆ ಗೌತಮಿ ಅವರ ಪತಿಯೂ ಮನೆಗೆ ಬಂದಿದ್ದರು. ಮನೆಯಲ್ಲಿ ಗೌತಮಿ ಹಾಗೂ ಅವರ ಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಗೌತಮಿ ಹಾಗೂ ಅವರ ಪತಿ ಒಟ್ಟಿಗೆ ಕೂತು ಮಾತನಾಡುತ್ತಿರುವಾಗ ಅದನ್ನು ಧನರಾಜ್ ಮತ್ತು ಹನುಮಂತು ಕದ್ದು ಮುಚ್ಚಿ ನೋಡುತ್ತಿದ್ದರು. ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೌತಮಿ ಜಾಧವ್ರನ್ನ ಮಾತನಾಡಿಸಲು ಗಂಡ ಅಭಿಷೇಕ್ ಅವರು ಬಂದಾಗ ಇಬ್ಬರು ಬೇರೆ ರೂಮ್ಗೆ ಹೋಗಿ ಒಬ್ಬರಿಗೊಬ್ಬರು ಕೇಕ್ ತಿನ್ನಿಸುತ್ತಿದ್ದರು.
ಈ ವೇಳೆ ರೂಮ್ ಹೊರಗಡೆಯಿಂದ ಹನುಮಂತು, ಧನರಾಜ್ ಇಣುಕಿ ನೋಡುತ್ತಿದ್ದರು. ಇದು ಸದ್ಯ ಎಲ್ಲ ಕಡೆ ವೈರಲ್ ಆಗಿದೆ. ಇದರ ಬಗ್ಗೆ ಪ್ರಶ್ನೆ ಮಾಡಿರುವ ಸುದೀಪ್ ಅವರು, ನಿಮಗೆ ಏನ್ ನೋಡುವ ಕ್ಯೂರಾಸಿಟಿ ಇತ್ತು ಎಂದಿದ್ದಾರೆ. ಇದಕ್ಕೆ ಹನುಮಂತು ಕೇಕ್ ತಿನ್ನಿಸುತ್ತಿದ್ದರಲ್ಲ, ಅದನ್ನ ನೋಡುತ್ತಿದ್ದೇವು ಸರ್ ಎಂದಿದ್ದಾರೆ. ಮತ್ತೆ ಪ್ರಶ್ನೆ ಮಾಡಿದ ಸುದೀಪ್ ಅವರು, ಏನ್ ಎಕ್ಸ್ಪರ್ಟ್ ಮಾಡುತ್ತಿದ್ದೀರಿ ಧನರಾಜ್ ಎಂದು ಕೇಳಿದಾಗ, 3 ತಿಂಗಳು ಆಯಿತಲ್ಲ ಸರ್.. ಎನ್ನುತ್ತಿದ್ದಂತೆ ಎಲ್ಲರು ನಕ್ಕಿದ್ದಾರೆ.
ಒಂದು ವೇಳೆ ನೀವಿಬ್ಬರು ನೋಡುವಾಗ ಏನಾದರೂ ಕಂಟೇಂಟ್ ಸಿಕ್ಕಿದ್ದರೇ ಏನ್ ಮಾಡುತ್ತಿದ್ದೀರಿ ಎಂದು ಕಿಚ್ಚ ಪ್ರಶ್ನೆ ಮಾಡುತ್ತಿದ್ದಂತೆ, ಅದನ್ನೇ ರಿವೆಂಡ್ ಮಾಡಿ.. ರಿವೆಂಡ್ ಮಾಡಿ ಮನಸಲ್ಲೇ ಯೋಚನೆ ಮಾಡುತ್ತಿದ್ದೆ ಎಂದು ಹೇಳಿ ಎಲ್ಲರನ್ನೂ ಧನರಾಜ್ ನಗಿಸಿದ್ದಾರೆ. ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಈ ತಮಾಷೆಯ ವಿಡಿಯೋಗಳನ್ನು ಎಲ್ಲರಿಗೂ ತೋರಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?