Bigg Boss 11ರ ಗ್ರ್ಯಾಂಡ್ ಫಿನಾಲೆಗೆ ದಿನಾಂಕ ಫಿಕ್ಸ್.? ಕಿಚ್ಚ ಸುದೀಪ್ ಕೊಟ್ರು ಬಿಗ್ ಅಪ್ಡೇಟ್.!

ಜನವರಿ 5, 2025 - 20:01
 0  18
Bigg Boss 11ರ ಗ್ರ್ಯಾಂಡ್ ಫಿನಾಲೆಗೆ ದಿನಾಂಕ ಫಿಕ್ಸ್.? ಕಿಚ್ಚ ಸುದೀಪ್ ಕೊಟ್ರು ಬಿಗ್ ಅಪ್ಡೇಟ್.!

ಕಳೆದ ಸೀಸನ್ನಲ್ಲಿ 112 ದಿನಗಳ ಕಾಲ ಬಿಗ್ ಬಾಸ್ ನಡೆದಿತ್ತು. ಅಕ್ಟೋಬರ್ 8ರಂದು ಆರಂಭ ಆಗಿದ್ದ ಶೋ ಜನವರಿ 28ರವರೆಗೆ ನಡೆದಿತ್ತು. ಒಟ್ಟೂ 21 ಸ್ಪರ್ಧಿಗಳು ಮನೆ ಒಳಗೆ ಬಂದಿದ್ದರು. ಕಾರ್ತಿಕ್ ಮಹೇಶ್ ಅವರು ಸೀಸನ್ ವಿನ್ನರ್ ಆದರೆ, ಡ್ರೋನ್ ಪ್ರತಾಪ್ ರನ್ನರ್ಅಪ್ ಆದರು.

ಬಾರಿಯ ಬಿಗ್ ಬಾಸ್ ಆರಂಭ ಆಗಿದ್ದು ಸೆಪ್ಟೆಂಬರ್ 29ರಂದು. ಹಲವು ಡ್ರಾಮಾಗಳಿಗೆ ಬಾರಿಯ ಬಿಗ್ ಸಾಕ್ಷಿ ಆಯಿತು. ಬಿಗ್ ಬಾಸ್ ಕನ್ನಡ ಸೀಸನ್ 11ನೇ ಸೀಸನ್ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದೆ. ಸದ್ಯ ದೊಡ್ಮನೆಯಲ್ಲಿ 9 ಮಂದಿ ಇದ್ದು ಮೂಲಕ ಫಿನಾಲೆಗೆ ದಿನಾಂಕ ಹತ್ತಿರ ಆಗುತ್ತಲೇ ಇದೆ. ಹಾಗಾದರೆ ಫೈನಲ್ ಎಪಿಸೋಡ್ನಡೆಯೋದು ಯಾವಾಗ? ಪ್ರಶ್ನೆಗೆ ಉತ್ತರ ಬಹುತೇಕ ಸಿಕ್ಕಂತೆ ಆಗಿದೆ.

ಬಿಗ್ಬಾಸ್ ಫಿನಾಲೆಗೆ ಇನ್ನೆಷ್ಟು ವಾರ ಬಾಕಿ ಇದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸುದೀಪ್ ಹೇಳಿರುವಂತೆ ಇನ್ನು ಫಿನಾಲೆಗೆ ಇನ್ನು ಮೂರು ವಾರ ಇದೆಯಂತೆ. ಅಂದರೆ ಇನ್ನು 21 ದಿನದಲ್ಲಿ ಶೋ ಫಿನಾಲೆ ನಡೆದು ಬಾರಿ ವಿನ್ನರ್ ಯಾರು ಎಂಬುದು ಖಾತ್ರಿ ಆಗಲಿದೆ. ಶೋ ಅಂತ್ಯವಾಗಲಿದೆ, ಮಾತ್ರವಲ್ಲದೆ ಬಿಗ್ಬಾಸ್ ಜೊತೆ ಸುದೀಪ್ಅವರ ಪಯಣವೂ ಅಂತ್ಯವಾಗಲಿದೆ.

ಬಿಗ್ಬಾಸ್ ಮನೆಯಲ್ಲಿ ಇನ್ನೂ ಒಂಬತ್ತು ಮಂದಿ ಇದ್ದಾರೆ. ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಏಕೆಂದರೆ ವಾರ ನಾಮಿನೇಷನ್ ಸಹ ಆಗಿಲ್ಲ. ಫಿನಾಲೆ ವಾರಕ್ಕೆ ಸಾಮಾನ್ಯವಾಗಿ ಐದು ಜನ ಬರುತ್ತಾರೆ. ಹಾಗಾಗಿ ಮುಂದಿನ ವಾರ ಇಬ್ಬರನ್ನು ಎಲಿಮಿನೇಟ್ ಮಾಡುವ ಸಾಧ್ಯತೆ ಇದೆ. ಅದರ ಮುಂದಿನ ವಾರ ಒಬ್ಬರನ್ನು ಎಲಿಮಿನೇಟ್ ಮಾಡಿ ಕೊನೆಯ ವಾರಕ್ಕೆ ಆರು ಅಥವಾ ಐದು ಮಂದಿಯನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

 

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow