ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ಕೇಸ್’ಗೆ ಬಿಗ್ ಟ್ವಿಸ್ಟ್: ಪವಿತ್ರಾ ಗೌಡ ರೀತಿಯೇ ಪ್ಲಾನ್ ಕೊಟ್ಟ ಬಾಲಕಿ ಅಂದರ್!

ಜುಲೈ 7, 2025 - 14:01
 0  54
ಯುವಕನ ಬಟ್ಟೆ ಬಿಚ್ಚಿಸಿ ಹಲ್ಲೆ ಕೇಸ್’ಗೆ ಬಿಗ್ ಟ್ವಿಸ್ಟ್: ಪವಿತ್ರಾ ಗೌಡ ರೀತಿಯೇ ಪ್ಲಾನ್ ಕೊಟ್ಟ ಬಾಲಕಿ ಅಂದರ್!

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಪ್ರಕರಣ ಇದೀಗ ಭಾರೀ ಸದ್ದು ಮಾಡುತ್ತಿದೆ. 17 ವರ್ಷದ ಶಾಲಾ ವಿದ್ಯಾರ್ಥಿನಿಯಾದ ಹುಡುಗಿ ತನ್ನ ಮಾಜಿ ಪ್ರೇಮಿಯ ಮೇಲೆ ಹಲ್ಲೆ ಮಾಡಿಸುವಂತೆ ಪ್ಲಾನ್ ಮಾಡಿ, 11 ಜನರ ತಂಡವನ್ನು ನೇಮಿಸಿದ್ದಾಳೆ.

ಪ್ರೀತಿ ಆರಂಭವಾದುದು ಶಾಲಾ ದಿನಗಳಿಂದ. ಇಬ್ಬರು ಕಾಲೇಜಿಗೆ ಕಾಲಿಟ್ಟಾಗ ಪ್ರೀತಿ ಬಿರುಕು ಬಿಟ್ಟಿತ್ತು. ನಡುವೆ ಕುಶಾಲ್ ಎಂಬ ಯುವಕ ಹುಡುಗಿಗೆ ಖಾಸಗಿ ಕ್ಷಣಗಳ ಫೋಟೋ ತೋರಿಸಿ ಬ್ಲ್ಯಾಕ್ಮೇಲ್ ಮಾಡಿದ ಆರೋಪವಿದೆ. ಇದರಿಂದ ಬೆರಕಾದ ಹುಡುಗಿ, ತನ್ನ ಸ್ನೇಹಿತರಿಗೆ ವಿಚಾರವನ್ನು ಹಂಚಿಕೊಂಡಿದ್ದಾಳೆ. “ಅವನಿಗೆ ಪಾಠ ಕಲಿಸಬೇಕುಎಂದು ಹುಡುಗಿ ಹೇಳಿದ್ದಂತೆ, ಆಕೆಯ ಸ್ನೇಹಿತರು ಪ್ಲಾನ್ ರೂಪಿಸಿದರು.

ಯೋಜನೆಯಂತೆ, ಎಜಿಪಿ ಲೇಔಟ್ ಬಳಿ "ಬಂದೆ ಮಾತಾಡೋಣ" ಎಂಬ ನೆಪದಲ್ಲಿ ಕುಶಾಲ್ ಅನ್ನು ಕರೆಯಲಾಗಿತ್ತು. ಸ್ಥಳಕ್ಕೆ ಬಂದ ಆತನು ಕಾರಿನಲ್ಲಿ ಕುಳಿತುಕೊಂಡ ಕೂಡಲೇ ಅಪಹರಣಕ್ಕೆ ಒಳಗಾದ. ಆತನನ್ನು ಕಾರಿನಲ್ಲಿ ಬಲವಂತವಾಗಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಕಾರ್ನಲ್ಲೇ ಹುಡುಗಿಯ ಸಮ್ಮುಖದಲ್ಲೇ ಹಲ್ಲೆ ಆರಂಭವಾಯಿತು.

ಅಷ್ಟರಲ್ಲಿ ಘಟನೆ ವಿಕೃತ ರೂಪ ಪಡೆದಿತುಯುವಕನನ್ನು ಬೆತ್ತಲು ಮಾಡಿ ವಿಡಿಯೋ ಮಾಡಲಾಯಿತು. ಬಳಿಕ ಶಾರೀರಿಕವಾಗಿ ದುರ್ಬಳಕೆ ಹಾಗೂ ಕ್ರೂರ ಹಲ್ಲೆ ನಡೆದಿದ್ದು, ಘಟನೆಯು ನಿರ್ದಯತೆಯ ಅಂಕಿತ ಹಾಕಿದೆ.

ಕುರಿತು ತನಿಖೆ ನಡೆಸಿದ ಸೋಲದೇವನಹಳ್ಳಿ ಪೊಲೀಸರು, 17 ವರ್ಷದ ಹುಡುಗಿಯನ್ನು ಬಂಧಿಸಿ ಕಾನೂನು ಸಂಘರ್ಷ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾಗಿದ್ದ 11 ಮಂದಿಯಲ್ಲಿ 8 ಜನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಉಳಿದ ಆರೋಪಿಗಳ ಬಂಧನ ಮುಂದುವರಿದಿದೆ. ಮುಖ್ಯ ಆರೋಪಿ ಹೇಮಂತ್, ಈಗಾಗಲೇ ಹಲವಾರು ಹಲ್ಲೆ ಪ್ರಕರಣಗಳಲ್ಲಿ ಅಪರಾಧ ಚರಿತ್ರೆ ಹೊಂದಿದ್ದನೆಂಬ ಮಾಹಿತಿ ಲಭ್ಯವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow