ರಿಂಕು ಸಿಂಗ್ ಎದೆ ಮೇಲೆ ಅಂಬೇಡ್ಕರ್ ಟ್ಯಾಟೂ!? ಇದು ನಿಜಾನಾ?

ಟೀಮ್ ಇಂಡಿಯಾ ಸ್ಪೋಟಕ ಯುವ ಬ್ಯಾಟರ್ ರಿಂಕು ಸಿಂಗ್ ಅವರು ಅಂಬೇಡ್ಕರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಿಂಕು ಸಿಂಗ್ ಅವರ ಈ ಚಿತ್ರವನ್ನು ಹಲವು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ರಿಂಕು ನಿಜಕ್ಕೂ ಬಿಆರ್ ಅಂಬೇಡ್ಕರ್ ಅವರ ಟ್ಯೂಟೂ ಹಾಕಿಸಿಕೊಂಡಿದ್ದಾರಾ?, ಈ ವೈರಲ್ ಫೋಟೋದ ನಿಜಾಂಶ ಏನು? ನೋಡೋಣ
ಫೋಟೋದ ಸತ್ಯಾಸತ್ಯತೆಯನ್ನು ಪರಿಶೋದಿಸಿದಾಗ ಇದು ಕೃತಕ ಬುದ್ದಿಮತ್ತೆಯಿಂದ ರಚಿತವಾದ ಫೋಟೋ ಎಂಬುದು ತಿಳಿದುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ, ರಿಂಕು ಸಿಂಗ್ ಅವರ ಸಾಮಾಜಿಕ ಮಾಧ್ಯಮ ಹ್ಯಾಂಡಲ್ನಲ್ಲಿ ಸರ್ಚ್ ಮಾಡಿದ್ದೇವೆ. ಆದರೆ, ಇಲ್ಲಿ ಎಲ್ಲೂ ಈ ವೈರಲ್ ಚಿತ್ರ ಕಂಡುಬಂದಿಲ್ಲ. ಗೂಗಲ್ನಲ್ಲಿ ಕೂಡ ಇದರ ಬಗ್ಗೆ ಹುಡುಕಿದ್ದೇವೆ. ಅಲ್ಲೂ ರಿಂಕು ಸಿಂಗ್ ಅಂಬೇಡ್ಕರ್ ಅವರ ಟ್ಯಾಟೂ ಹಾಕಿದ ಬಗ್ಗೆ ವಿಶ್ವಾಸರ್ಹ ವರದಿ ಕಂಡುಬಂದಿಲ್ಲ.
ಹೀಗಾಗಿ ಈ ಫೋಟೋ ಕೃತಕ ಬುದ್ದಿಮತ್ತೆಯಿಂದ ತಯಾರಿಸಿರಬಹುದು ಎಂಬ ಅನುಮಾನ ಮೂಡಿತು. ಇದಕ್ಕಾಗಿ ನಾವು ಎಐ ಫೋಟೋಗಳನ್ನು ಕಂಡುಹಿಡಿಯುವ decopy.ai ಉಪಕರಣದೊಂದಿಗೆ ವೈರಲ್ ಚಿತ್ರವನ್ನು ಪರಿಶೀಲಿಸಿದ್ದೇವೆ. ಇದರ ಫಲಿತಾಂಶದ ಪ್ರಕಾರ ರಿಂಕು ಸಿಂಗ್ ಅವರ ವೈರಲ್ ಚಿತ್ರವು 92.84 ಶೇಕಡಾ ನಕಲಿಯಾಗಿದೆ. ಈ ಮೂಲಕ ರಿಂಕು ಸಿಂಗ್ ಅವರು ತಮ್ಮ ಎದೆಯ ಮೇಲೆ ಅಂಬೇಡ್ಕರ್ ಅವರ ಟ್ಯಾಟೂ ಹಾಕಿಸಿಕೊಂಡಿಲ್ಲ ಬದಲಾಗಿ ಇದು ಕೃತಕ ಬುದ್ದಿಮತ್ತೆಯಿಂದ ರಚಿತವಾಗಿದೆ ಎಂದು ನಾವು ಖಚಿತವಾಗಿ ಹೇಳುತ್ತೇವೆ.
ಕೆಲವು ದಿನಗಳ ಹಿಂದೆ, ರಿಂಕು ಸಿಂಗ್ ಅವರ ನಿಶ್ಚಿತಾರ್ಥದ ಅನೇಕ ಚಿತ್ರಗಳು ಕೂಡ ವೈರಲ್ ಆಗಿದ್ದವು. ರಿಂಕು ಅವರು ಎಸ್ಪಿ ಸಂಸದೆ ಪ್ರಿಯಾ ಸರೋಜ್ ಅವರಿಗೆ ನಿಶ್ಚಿತಾರ್ಥದ ಉಂಗುರವನ್ನು ಹಾಕುವ ಫೋಟೋ ಹರಿದಾಡಿತ್ತು. ಅನೇಕ ಬಳಕೆದಾರರು ಈ ಚಿತ್ರಗಳನ್ನು ನಿಜವೆಂದು ನಂಬಿದ್ದರು. ಆದರೆ, ಇದು ಕೂಡ ನಿಜವಲ್ಲ ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






