ಶನಿವಾರ ಅಪ್ಪಿತಪ್ಪಿಯೂ ಈ ಬಣ್ಣದ ಬಟ್ಟೆ ಧರಿಸಬಾರದು! ಕಷ್ಟ ಬೆನ್ನತ್ತಂತೆ!

ಫೆಬ್ರವರಿ 1, 2025 - 07:01
 0  11
ಶನಿವಾರ ಅಪ್ಪಿತಪ್ಪಿಯೂ ಈ ಬಣ್ಣದ ಬಟ್ಟೆ  ಧರಿಸಬಾರದು! ಕಷ್ಟ  ಬೆನ್ನತ್ತಂತೆ!

ಶನಿವಾರ ಶನಿದೇವನಿಗೆ ಮೀಸಲಾದ ದಿನ. ಈ ದಿನ ಶನಿದೋಷವಿರುವವರು ಹೆಚ್ಚಿನವರು ಉಪವಾಸವಿದ್ದು, ಶನಿಯ ಪೂಜೆ ಕೈಗೊಳ್ಳುತ್ತಾರೆ. ಶನೈಶ್ಚರ ದೇವಾಲಯಕ್ಕೆ ಭೇಟಿ ನೀಡಿ ಛಾಯಾಪಾತ್ರೆ ದಾನ, ಶನಿಗೆ ಸಂಬಂಧಿಸಿದ ವಸ್ತುಗಳ ದಾನವನ್ನು ಮಾಡುತ್ತಾರೆ. ಶನಿದೇವನಿಗೆಂದೇ ಅರ್ಪಿಸಲಾದ ಈ ವಿಶೇಷ ದಿನದಂದು ಯಾವ ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು,

ಶನಿವಾರವನ್ನು ಶನಿ ದೇವರಿಗೆ ವಿಶೇಷವಾಗಿ ಅರ್ಪಿಸಲಾಗಿದೆ. ಈ ದಿನ ಶನಿ ದೇವರನ್ನು ಪೂರ್ಣ ಆಚರಣೆಗಳೊಂದಿಗೆ ಪೂಜಿಸಲಾಗುತ್ತದೆ.  ಆದರೆ ಶನಿವಾರ ಕೆಲವೊಂದು ಕೆಲಸಗಳನ್ನು ಮಾಡಲೇಬಾರದು ಎನ್ನಲಾಗುತ್ತೆ. 

ಶನಿವಾರದಂದು ಹೆಚ್ಚಿನ ಜನರು ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಏಕೆಂದರೆ ಶನಿವಾರ ಶನಿಯ ದಿನ. ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎನ್ನಲಾಗುತ್ತದೆ. ಕಪ್ಪು ಶನಿಯ ಬಣ್ಣ. ಶನಿವಾರದಂದು ಕಪ್ಪು ಬಣ್ಣವನ್ನು ಧರಿಸುವುದರಿಂದ ಶನಿ ದೇವರ ಆಶೀರ್ವಾದವನ್ನು ಪಡೆಯಬಹುದು. ಈ ಬಣ್ಣವು ಜ್ಯೋತಿಷ್ಯದಲ್ಲಿ ಆಳವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಬಣ್ಣವು ವ್ಯಕ್ತಿಯ ವ್ಯಕ್ತಿತ್ವದ ಗುಣಲಕ್ಷಣಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಶನಿವಾರದಂದು ಕಪ್ಪು ಬಣ್ಣವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತದೆ.

ಶನಿವಾರದಂದು ಹೆಚ್ಚಿನ ಜನರು ಕಪ್ಪು ಬಟ್ಟೆಯನ್ನು ಧರಿಸುತ್ತಾರೆ. ಏಕೆಂದರೆ ಶನಿವಾರ ಶನಿಯ ದಿನ. ವೈದಿಕ ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯದ ದೇವರು ಎನ್ನಲಾಗುತ್ತದೆ. ಕಪ್ಪು ಶನಿಯ ಬಣ್ಣ. ಶನಿವಾರದಂದು ಕಪ್ಪು ಬಣ್ಣವನ್ನು ಧರಿಸುವುದರಿಂದ ಶನಿ ದೇವರ ಆಶೀರ್ವಾದವನ್ನು ಪಡೆಯಬಹುದು. ಈ ಬಣ್ಣವು ಜ್ಯೋತಿಷ್ಯದಲ್ಲಿ ಆಳವಾದ ಪ್ರಾಮುಖ್ಯತೆಯನ್ನು ಹೊಂದಿದೆ. ಬಣ್ಣವು ವ್ಯಕ್ತಿಯ ವ್ಯಕ್ತಿತ್ವದ ಗುಣಲಕ್ಷಣಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಶನಿವಾರದಂದು ಕಪ್ಪು ಬಣ್ಣವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳು ಸಿಗುತ್ತದೆ.

ಶನಿಗೆ ಕಪ್ಪು ಬಣ್ಣ ಏಕೆ ಇಷ್ಟ? ಶನಿಯ ತಾಯಿಯ ಹೆಸರು ಛಾಯಾ. ಗರ್ಭಿಣಿಯಾಗಿದ್ದ ಸಮಯದಲ್ಲಿ ಶಿವನ ಬಗ್ಗೆ ಕಠೋರ ತಪಸ್ಸು ಮಾಡುತ್ತಿದ್ದಳು. ಈ ಕಾರಣಕ್ಕಾಗಿ, ಗರ್ಭಾವಸ್ಥೆಯಲ್ಲಿ ತನ್ನ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, ಶನಿ ಹುಟ್ಟಿದಾಗ ಕಪ್ಪು ಮೈಬಣ್ಣ ಹೊಂದಿದ್ದ. ಹಾಗಾಗಿ ಶನಿಗೆ ಕಪ್ಪು ಬಣ್ಣ ಎಂದರೆ ಬಹಳ ಇಷ್ಟ.

ಶನಿವಾರದಂದು ಕಪ್ಪು ಬಣ್ಣವನ್ನು ಧರಿಸುವುದರಿಂದ ಶನಿ ದೇವರ ಆಶೀರ್ವಾದವನ್ನು ಪಡೆಯಬಹುದು. ಇದು ನಿಮ್ಮ ಜಾತಕದಲ್ಲಿ ಶನಿ ದೋಷ ಇದ್ದರೆ ಅಥವಾ ಸಾಡೇ ಸಾತಿ ಇತರ ಸಮಸ್ಯೆಗಳಿದ್ದರೆ ಅದಕ್ಕೆಲ್ಲಾ ಇದರಿಂದ ಪರಿಹಾರವನ್ನ ಪಡೆಯಬಹುದು. ಏಕೆಂದರೆ ಕಪ್ಪು ಬಣ್ಣವನ್ನು ಶನಿದೇವನಿಗೆ ಪ್ರಿಯವೆಂದು ಪರಿಗಣಿಸಲಾಗಿದೆ

ಶನಿದೇವನಿಗೆ ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆ ಎಂದರೆ ತುಂಬಾ ಇಷ್ಟ. ಶನಿವಾರದಂದು ಶನಿದೇವನ ಆಶೀರ್ವಾದ ಪಡೆಯಲು ನೀವು ನೀಲಿ ಮತ್ತು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಶನಿವಾರ ಕಪ್ಪು ಹಾಗೂ ನೀಲಿ ಬಣ್ಣದ ಬಟ್ಟೆ ಧರಿಸಿದರೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬಹುದು. aಲ್ಲದೇ, ನೀವು ಶನಿವಾರದಂದು ಸಣ್ಣ ನೀಲಿ ಅಥವಾ ಕಪ್ಪು ಬಟ್ಟೆಯನ್ನು ತಮ್ಮ ಪರ್ಸ್‌ನಲ್ಲಿ ಇಟ್ಟುಕೊಂಡರೆ ಬಹಳಷ್ಟು ಒಳ್ಳೆಯ ಫಲಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ

ಶನಿವಾರದಂದು ಕಪ್ಪು ಬಟ್ಟೆಯನ್ನು ಧರಿಸುವುದರಿಂದ ಶನಿ ಸಾಡೇ ಸತಿಯಿಂದ ಪರಿಹಾರವನ್ನು ಪಡೆಯಬಹುದು. ಅಲ್ಲದೇ, ನೀವು ಕಪ್ಪು ಬಟ್ಟೆಗಳನ್ನು ಧರಿಸುವುದು ಜ್ಯೋತಿಷ್ಯವು ಸಾಡೇ ಸತಿಯ ದುಷ್ಪರಿಣಾಮಗಳನ್ನು ಎದುರಿಸಲು ನಿಮಗೆ ಸಹಾಯ ಮಾಡುತ್ತದೆ. ಅಲ್ಲದೇ, ನೀವು ಯಾವುದಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಅದರಿಂದ ಸಹ ನೀವು ಪರಿಹಾರ ಪಡೆಯಬಹುದು.

ಆದರೆ ಶನಿವಾರ ಯಾವುದೇ ಕಾರಣಕ್ಕೂ ನೀವು ಕೆಂಪು ಬಣ್ಣದ ಬಟ್ಟೆಯನ್ನ ಧರಿಸಬಾರದು. ಅದರ ಜೊತೆಗೆ ನೀವು ಕೆಂಪು ಬಣ್ಣದ ಯಾವುದೇ ವಸ್ತುಗಳನ್ನ ಖರೀದಿ ಮಾಡಬಾರದು. ಇದರಿಂದ ನೀವು ಅನೇಕ ಸಮಸ್ಯೆಗಳನ್ನ ಅನುಭವಿಸಬೇಕಾಗುತ್ತದೆ. ಏಕೆಂದರೆ ಕೆಂಪು ಮಂಗಳನ ಬಣ್ಣ ಎನ್ನಲಾಗುತ್ತದೆ. ಮಂಗಳ ಹಾಗೂ ಶನಿಯ ನಡುವೆ ಉತ್ತಮ ಸಂಬಂಧವಿಲ್ಲ. ಈ 2 ವಿರುದ್ಧ ಗ್ರಹಗಳು. ಹಾಗಾಗಿ ನೀವು ಶನಿಯ ವಾರದಂದು ಮಂಗಳನ ಬಣ್ಣವನ್ನ ಧರಿಸುವುದರಿಂದ ಕಷ್ಟಗಳು ನಿಮ್ಮ ಬೆನ್ನು ಬೀಳುವ ಸಾಧ್ಯತೆ ಇದೆ.

ಇದರ ಜೊತೆಗೆ ನೀವು ಶನಿವಾರ ಬಿಳಿ ಬಣ್ಣದ ಬಟ್ಟೆಗಳನ್ನ ಸಹ ಧರಿಸದಿರುವುದು ಸಹ ಉತ್ತಮ. ಇದರಿಂದ ಸಹ ನಿಮಗೆ ಯಾವುದೇ ರೀತಿಯ ಒಳ್ಳೆಯ ಫಲಗಳು ಸಹ ಸಿಗುವುದಿಲ್ಲ. ಈ ಎಲ್ಲಾ ಕಾರಣದಿಂದ ಶನಿವಾರ ಕೆಂಪು ಹಾಗೂ ಬಿಳಿ ಬಟ್ಟೆಗಳನ್ನ ಧರಿಸದಿರುವುದು ಉತ್ತಮ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow