ಪೊಲೀಸರ ದರ್ಪ: ವ್ಹೀಲ್ಚೇರ್ ಮೇಲೆ ಕುಳಿತಿದ್ದವನ ಮೇಲೆ ಲಾಠಿ ಪ್ರಹಾರ!
ಜೈಪುರ:- ಹೃದಯ ವಿದ್ರಾವಕ ಘಟನೆಯೊಂದು ಜೈಪುರದಲ್ಲಿ ನಡೆದಿದೆ.
ವ್ಹೀಲ್ಚೇರ್ನಲ್ಲಿ ಕುಳಿತ ದಿವ್ಯಾಂಗನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ರೈಲು ನಿಲ್ದಾಣದಲ್ಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮೊದಲು ವ್ಯಕ್ತಿಯೊಬ್ಬರು ಅವರಿಗೆ ಕಪಾಳಮೋಕ್ಷ ಮಾಡುತ್ತಾರೆ. ಖಾಕಿ ಸಮವಸ್ತ್ರದಲ್ಲಿ ಕಾಣುವ ವ್ಯಕ್ತಿಯೊಬ್ಬರು ಲಾಠಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಥಳಿಸಿದ ನಂತರ, ಆತನನ್ನು ಬೆದರಿಸಿ ನಿಲ್ದಾಣದಿಂದ ಹೊರಗೆ ತಳ್ಳಿದ್ದಾರೆ.
ಈ ಇಡೀ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಪೊಲೀಸರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?