ಜೈಲಲ್ಲಿ ಪ್ರಜ್ವಲ್ ರೇವಣ್ಣ ಗೆ ಹುದ್ದೆ: ದಿನಕ್ಕೆ ಸಂಬಳ ಎಷ್ಟು ಗೊತ್ತಾ?
ಬೆಂಗಳೂರು:- ಅತ್ಯಾಚಾರ ಕೇಸ್ ನಲ್ಲಿ ಜೈಲಲ್ಲಿ ಇರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಗೆ ಹುದ್ದೆ ಸಿಕ್ಕಿದೆ. ಜೈಲಾಧಿಕಾರಿಗಳು ಪ್ರಜ್ವಲ್ ರೇವಣ್ಣರನ್ನು ಲೈಬ್ರರಿಯ ಕ್ಲರ್ಕ್ ಆಗಿ ನೇಮಿಸಿದ್ದು, ಪುಸ್ತಕಗಳನ್ನು ಕೊಡುವುದು ಹಾಗೂ ನೋಂದಣಿ ಮಾಡಿಕೊಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ
ಸದ್ಯ ಒಂದು ದಿನದ ಮಟ್ಟಿಗೆ ಪ್ರಜ್ವಲ್ ಕೆಲಸ ಮಾಡಿದ್ದು, ದಿನಗೂಲಿಯಾಗಿ ದಿನಕ್ಕೆ 522 ರೂ. ಗಳನ್ನ ನೀಡಲಾಗುತ್ತದೆ. ಕೆಲಸಕ್ಕೆ ಹಾಜರಾಗದಿದ್ದರೆ ಸಂಬಳ ನೀಡಲಾಗುವುದಿಲ್ಲ.
ಟ್ರಯಲ್ ಕೋರ್ಟ್‌ಗೆ ಆಗಾಗ ಬರಬೇಕಾಗಿರುವುದರಿಂದ ಹಾಗೂ ವಕೀಲರ ಜೊತೆ ಇತರೇ ಕೇಸ್‌ಗಳ ಸಂಬಂಧ ಚರ್ಚೆ ಮಾಡಬೇಕಾಗಿರುವ ಕಾರಣ ಪ್ರಜ್ವಲ್ ರೇವಣ್ಣ ಅವರನ್ನು ಪೂರ್ತಿ ಕೆಲಸಕ್ಕೆ ನಿಯೋಜಿಸಿಲ್ಲ ಎನ್ನಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?