ಪೊಲೀಸರ ದರ್ಪ: ವ್ಹೀಲ್​ಚೇರ್​ ಮೇಲೆ ಕುಳಿತಿದ್ದವನ ಮೇಲೆ ಲಾಠಿ ಪ್ರಹಾರ!

ಸೆಪ್ಟೆಂಬರ್ 7, 2025 - 16:43
 0  11
ಪೊಲೀಸರ ದರ್ಪ: ವ್ಹೀಲ್​ಚೇರ್​ ಮೇಲೆ ಕುಳಿತಿದ್ದವನ ಮೇಲೆ ಲಾಠಿ ಪ್ರಹಾರ!

ಜೈಪುರ:- ಹೃದಯ ವಿದ್ರಾವಕ ಘಟನೆಯೊಂದು ಜೈಪುರದಲ್ಲಿ ನಡೆದಿದೆ. 

ವ್ಹೀಲ್ಚೇರ್ನಲ್ಲಿ ಕುಳಿತ ದಿವ್ಯಾಂಗನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ರೈಲು ನಿಲ್ದಾಣದಲ್ಲಿ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಮೊದಲು ವ್ಯಕ್ತಿಯೊಬ್ಬರು ಅವರಿಗೆ ಕಪಾಳಮೋಕ್ಷ ಮಾಡುತ್ತಾರೆ. ಖಾಕಿ ಸಮವಸ್ತ್ರದಲ್ಲಿ ಕಾಣುವ ವ್ಯಕ್ತಿಯೊಬ್ಬರು ಲಾಠಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಥಳಿಸಿದ ನಂತರ, ಆತನನ್ನು ಬೆದರಿಸಿ ನಿಲ್ದಾಣದಿಂದ ಹೊರಗೆ ತಳ್ಳಿದ್ದಾರೆ. 

ಈ ಇಡೀ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಪೊಲೀಸರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow