ಪ್ರಧಾನಿ ಮೋದಿ ಸ್ವಾಗತಕ್ಕೆ ಕೇಸರಿ ಮಯವಾದ ಸಿಲಿಕಾನ್ ಸಿಟಿ ಬೆಂಗಳೂರು..!!
ಮೆಟ್ರೋ ಹಳದಿ ಲೈನ್ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಮೋದಿ ಬರುವ ಹಾದಿಯಲ್ಲಿ ಬಿಜೆಪಿ ಭರ್ಜರಿ ಸ್ವಾಗತ ವ್ಯವಸ್ಥೆ ಮಾಡಿದೆ.
ಮೋದಿ ಸಂಚರಿಸುವ ಮಾರ್ಗದಲ್ಲಿ ಮೇಕ್ರಿ ಸರ್ಕಲ್, ಚಾಲುಕ್ಯ ಸಿಗ್ನಲ್, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ, ಸೌತ್ ಎಂಡ್ ಸರ್ಕಲ್, ರಾಗಿಗುಡ್ಡ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಆರು ಸ್ಥಳಗಳಲ್ಲಿ ರಸ್ತೆ ಶೋ ನಡೆಯಲಿದೆ.
ಮೋದಿ ಸಂಚರಿಸುವ ದಾರಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಭಾವುಟಗಳನ್ನು ಹಾರಿಸಿ, ದೊಡ್ಡ ಬ್ಯಾನರ್ಗಳನ್ನು ಅಳವಡಿಸಿ ಕಮಲ ಬಣ್ಣದಲ್ಲಿ ನಗರವನ್ನು ಮೆರಗುಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?