ಸೊಂಟದ ವಿಷ್ಯಾ ಬೇಡವೋ ಶಿಷ್ಯ... ತಮಿಳು ಚಿತ್ರದಲ್ಲಿ ಸೊಂಟ ಬಳುಕಿಸಿದ ತನಿಷಾ ಕುಪ್ಪಂಡ!

ಸೊಂಟದ ವಿಷ್ಯಾ, ಬ್ಯಾಡವೋ ಶಿಷ್ಯ.. ಈ ಹಾಡು ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡಾಗೆ ತಕ್ಕ ಹಾಗಿದೆ. ಬಿಗ್ ಬಾಸ್ ಕನ್ನಡ 11’ರ ಖ್ಯಾತಿಯ ತನಿಷಾ ಕುಪ್ಪಂಡ ಅವರು ತಮಿಳು ಸಿನಿಮಾವೊಂದರಲ್ಲಿ ಸೊಂಟ ಬಳುಕಿಸಿದ್ದಾರೆ. ಮಾದಕವಾಗಿ ನಟಿ ಹೆಜ್ಜೆ ಹಾಕಿದ್ದಾರೆ.
ಕನ್ನಡದ ಸಿನಿಮಾಗಳಲ್ಲಿ ತನಿಷಾ ಬ್ಯುಸಿಯಾಗಿದ್ದಾರೆ. ಇದರ ನಡುವೆ ತಮಿಳಿನಲ್ಲಿಯೂ ಕೆಲಸ ಮಾಡಿದ್ದಾರೆ. ‘ಎನ್ ಕಾಧಲೇ’ ಚಿತ್ರದ ರಾಸಾನಾ ಓತಾ ರೋಸಾ ಹಾಡಿನ ಮೇಕಿಂಗ್ ವಿಡಿಯೋವನ್ನು ನಟಿ ಶೇರ್ ಮಾಡಿದ್ದಾರೆ. ಈ ಹಾಡು ಈಗಾಗಲೇ ರಿಲೀಸ್ ಆಗಿ ಸದ್ದು ಮಾಡುತ್ತಿದೆ. ಆದರೆ ಈ ಡ್ಯಾನ್ಸ್ ಮಾಡಲು ತೆರೆಹಿಂದಿನ ತಯಾರಿ ಹೇಗಿತ್ತು ಎಂಬುದರ ಝಲಕ್ ಅನ್ನು ನಟಿ ಹಂಚಿಕೊಂಡಿದ್ದಾರೆ. ಮಾದಕವಾಗಿ ಹೆಜ್ಜೆ ಹಾಕಿರೋ ತನಿಷಾರನ್ನು ನೋಡಿ ಬೆಂಕಿ ಡ್ಯಾನ್ಸ್ ಎಂದು ಫ್ಯಾನ್ಸ್ ಕೊಂಡಾಡಿದ್ದಾರೆ
ಅಂದಹಾಗೆ, ಕನ್ನಡದ ‘ಪೆನ್ಡ್ರೈವ್’ ಸಿನಿಮಾದಲ್ಲಿ ಮಾಲಾಶ್ರೀ ಜೊತೆ ತನಿಷಾ ನಟಿಸಿದ್ದಾರೆ. ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅವರೊಂದಿಗೆ ಕಿಶನ್ ಬಿಳಗಲಿ ಕೂಡ ನಟಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






