ಕ್ರಿಕೆಟ್ ಪ್ರೇಮಿಗಳ ಗಮನಕ್ಕೆ: IPL ಟೂರ್ನಿ ಸಂಪೂರ್ಣ ಸ್ಥಗಿತವಾಗಿಲ್ಲ - BCCI ಮಹತ್ವದ ನಿರ್ಧಾರ ಪ್ರಕಟ

ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಭಾರತ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನ ಮತ್ತು ಪಿಒಕೆಯಲ್ಲಿ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತು. ಇದಾದ ನಂತರ ಪಾಕಿಸ್ತಾನ ಸಿಟ್ಟಿಗೆದ್ದಿದ್ದು, ಒಂದರ ನಂತರ ಒಂದರಂತೆ ಅನೇಕ ನೀಚ ಕೃತ್ಯಗಳನ್ನು ಎಸಗುತ್ತಿದೆ. ಪಾಕಿಸ್ತಾನದ ಎಲ್ಲಾ ಪ್ರಯತ್ನಗಳನ್ನು ಭಾರತ ವಿಫಲಗೊಳಿಸಿದೆ.
ಆದಾಗ್ಯೂ ಮುನ್ನೇಚ್ಚರಿಕೆಯ ಕ್ರಮವಾಗಿ ಐಪಿಎಲ್ ಪಂದ್ಯಾವಳಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕೇಂದ್ರ ಮತ್ತು ಎಲ್ಲಾ ಫ್ರಾಂಚೈಸಿಗಳು ಮತ್ತು ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ, ಐಪಿಎಲ್ ಪಂದ್ಯಾವಳಿನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರರ್ಥ ಈ ಆವೃತ್ತಿಯಲ್ಲಿ ಉಳಿದ ಪಂದ್ಯಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು
ಹೌದು ಮಿಲಿಯನ್ ಡಾಲರ್ ಟೂರ್ನಿ 2025 ರ ಐಪಿಎಲ್ (IPL 2025) ಅನ್ನು ಒಂದು ವಾರದವರೆಗೆ ಮುಂದೂಡಲಾಗಿದೆ ಎಂದು ಬಿಸಿಸಿಐ (BCCI) ಅಧಿಕೃತ ಮಾಹಿತಿ ನೀಡಿದೆ. ಇದರರ್ಥ ವಾರದ ನಂತರ ಪರಿಸ್ಥಿತಿ ತಿಳಿಕೊಂಡರೆ ಐಪಿಎಲ್ ದ್ವಿತೀಯಾರ್ಧ ವಾರದ ನಂತರ ಆರಂಭವಾಗಲಿದೆ. ಇದು ಭಾರತದಲೇ ಮುಂದುವರೆಯಲಿದೆಯೋ ಅಥವಾ ವಿದೇಶವನ್ನು ಆಯ್ಕೆ ಮಾಡಲಾಗುತ್ತದೋ ಎಂಬುದು ವಾರದ ಬಳಿಕ ತಿಳಿಯಲಿದೆ. 2025 ರ ಐಪಿಎಲ್ ಪಂದ್ಯಾವಳಿಯನ್ನು ಕೇವಲ ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿಯೇ ಮಾಹಿತಿ ನೀಡಿದೆ.
ಬಿಸಿಸಿಐ ಮಹತ್ವದ ನಿರ್ಧಾರ
ಮುಂದಿನ ವಾರ ಐಪಿಎಲ್ನ ಹೊಸ ವೇಳಾಪಟ್ಟಿ ಬಿಡುಗಡೆಯಾಗಬಹುದು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿದೆ. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಐಪಿಎಲ್ ಅನ್ನು ಇನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿಲ್ಲ. ಇದನ್ನು ಕೇವಲ ಒಂದು ವಾರದ ಕಾಲ ಮುಂದೂಡಲಾಗಿದೆ. ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಹೊಸ ವೇಳಾಪಟ್ಟಿಯನ್ನು ಮತ್ತೆ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






