ತುರ್ತು ಪರಿಸ್ಥಿತಿಯ ಕರಾಳತೆಯ ಬಗ್ಗೆ ಯುವ ಪೀಳಿಗೆಗೆ ಅರಿವು: ಅಮಿತ್ ಶಾ!

ಜೂನ್ 25, 2025 - 14:04
 0  10
ತುರ್ತು ಪರಿಸ್ಥಿತಿಯ ಕರಾಳತೆಯ ಬಗ್ಗೆ ಯುವ ಪೀಳಿಗೆಗೆ ಅರಿವು: ಅಮಿತ್ ಶಾ!

 ನವದೆಹಲಿ:- ತುರ್ತು ಪರಿಸ್ಥಿತಿಯ ಕರಾಳತೆಯ ಬಗ್ಗೆ ದೇಶದ ಯುವ ಪೀಳಿಗೆಗೆ ಅರಿವು ಮೂಡಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಈ ಸಂಬಂಧ X ಮಾಡಿರುವ ಅವರು, ತುರ್ತು ಪರಿಸ್ಥಿತಿ  ಕಾಂಗ್ರೆಸ್ ಪಕ್ಷದ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯ ಪ್ರತಿಬಿಂಬವಾಗಿತ್ತು. ಮೋದಿ ಸರ್ಕಾರ ಈ ದಿನವನ್ನು ‘ಸಂವಿಧಾನ ಹತ್ಯೆ ದಿವಸ್’ ಎಂದು ಆಚರಿಸುತ್ತಿದೆ. ಈ ಮೂಲಕ ತುರ್ತು ಪರಿಸ್ಥಿತಿಯ ಕರಾಳತೆಯ ಬಗ್ಗೆ ದೇಶದ ಯುವ ಪೀಳಿಗೆಗೆ ಅರಿವು ಮೂಡಿಸಲಾಗುತ್ತಿದೆ. 

ಇಂದಿರಾ ಗಾಂಧಿ ಸರ್ಕಾರ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷ ಕಳೆದಿದೆ. ಆಳುವವರು ಸರ್ವಾಧಿಕಾರಿಗಳಾದಾಗ, ಅವರನ್ನು ಉರುಳಿಸುವ ಶಕ್ತಿಯನ್ನು ಜನರು ಹೊಂದಿರುತ್ತಾರೆ ಎಂಬುದನ್ನು ಈ ದಿನ ನೆನಪಿಸುತ್ತದೆ ಎಂದು ಬರೆದುಕೊಂಡಿದ್ದಾರೆ. ತುರ್ತು ಪರಿಸ್ಥಿತಿ ಸಮಯದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ನ್ಯಾಯಾಂಗದ ಕೈಗಳನ್ನು ಕಟ್ಟಿ ಹಾಕಲಾಯಿತು.

 ಸಾಮಾಜಿಕ ಕಾರ್ಯಕರ್ತರನ್ನು ಜೈಲಿಗೆ ಹಾಕಲಾಯಿತು. ಈ ಸಮಯದಲ್ಲಿ ದೇಶದ ಜನ ಇಂದಿರಾ ಗಾಂಧಿಯವರ ವಿರುದ್ಧ ಅಧಿಕಾರ ತ್ಯೆಜಿಸುವಂತೆ ಧ್ವನಿ ಎತ್ತಿದರು. ಸರ್ವಾಧಿಕಾರಿ ಕಾಂಗ್ರೆಸ್‌ನ್ನು ಬೇರುಸಹಿತ ಕಿತ್ತುಹಾಕಿದರು. ಈ ಹೋರಾಟದಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ವೀರರಿಗೆ ನಾನು ಗೌರವಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow