ಅಪ್ಪಾ, ನನಗೆ ಏನೂ ಮಾಡಬೇಡಿ.. ಮಗಳು ಅಂಗಲಾಚಿದ್ರೂ ಪಾಪಿ ತಂದೆಯಿಂದ ಅತ್ಯಾಚಾರ..!

ತೆಲಗಾಂಣ: ಮಾನವೀಯತೆಯ ಮಿತಿಗಳನ್ನು ಮೀರುವಂತಹ ದುರ್ಘಟನೆ ತೆಲಂಗಾಣದ ನಾರಾಯಣಪೇಟೆಯಲ್ಲಿ ನಡೆದಿದೆ. ಮದ್ಯದ ನಶೆಯಲ್ಲಿ ತನ್ನದೇ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಈ ಘಟನೆ ಜುಲೈ 25ರಂದು ನಾರಾಯಣಪೇಟೆಯ ಮಂಡಲ ವ್ಯಾಪ್ತಿಯಲ್ಲಿ ನಡೆದಿದೆ. 10 ವರ್ಷದ ಬಾಲಕಿಯನ್ನು ಮೆಹಬೂಬ್ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕಿ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ನಾಯಿ ಕಚ್ಚಿದ್ದ ಕಾರಣದಿಂದ ಸರ್ಕಾರಿ ಹಾಸ್ಟೆಲ್ನಿಂದ ಮನೆಗೆ ಮರಳಿದ್ದಳು.
ಜುಲೈ 25ರಂದು ಮಧ್ಯಾಹ್ನ ಆಕೆಯ ತಾಯಿ ದಿನಗೂಲಿ ಕೆಲಸಕ್ಕೆ ಹೋಗಿದ್ದಾಗ, ಆಕೆ ಮನೆಯಲ್ಲಿ ಒಬ್ಬಳೇ ಇದ್ದಳು, ಓದಿಕೊಳ್ಳುತ್ತಿದ್ದಳು. ಆಕೆಯ ತಂದೆ ಮದ್ಯಪಾನ ಮಾಡಿದ್ದ ಮೇಕೆ ಮೇಯಿಸಿ ಹಿಂದಿರುಗಿ ಬರುವಾಗ ನಶೆಯಲ್ಲಿದ್ದ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಪ್ಪಾ, ನನಗೆ ಏನೂ ಮಾಡಬೇಡಿ,
ನಿಮ್ಮ ಕಾಲಿಗೆ ಬೀಳುತ್ತೇನೆ ಎಂದು ಬಾಲಕಿ ಬೇಡಿಕೊಂಡರೂ ಆ ವ್ಯಕ್ತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕಿರುಚಾಟವನ್ನು ಕೇಳಿದ ಸ್ಥಳೀಯರು ಮನೆಗೆ ಓಡಿ ಬಂದರು. ರಕ್ತಸ್ರಾವವಾಗುತ್ತಿದ್ದ ಬಾಲಕಿಯನ್ನು ಕಂಡು ಕೂಡಲೇ ಆಕೆಯ ತಾಯಿಗೆ ವಿಷಯ ತಲುಪಿಸಿ, ಆಸ್ಪತ್ರೆಗೆ ರವಾನಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






