ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಮ್’ ಸಿನಿಮಾಗೆ ಬಂಪರ್ ರೆಸ್ಪಾನ್ಸ್: ಟ್ರೆಂಡಿಂಗ್’ನಲ್ಲಿ ಟಿಕೆಟ್ ಬುಕ್ಕಿಂಗ್

ವಿಜಯ್ ದೇವರಕೊಂಡ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕಿಂಗ್ಡಮ್’ ಜುಲೈ 31ರಂದು ತೆರೆ ಕಾಣುತ್ತಿದೆ. ಸ್ಪೈ ಆಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾದ ಟ್ರೈಲರ್ ಗಮನ ಸೆಳೆದಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.
ಈ ನಡುವೆ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ಟಿಕೆಟ್ಗಳು ಮುಂಗಡವಾಗಿ ಮಾರಾಟ ಆಗಿವೆ. ಬುಕ್ ಮೈ ಶೋನಲ್ಲಿ ‘ಕಿಂಗ್ಡಮ್’ ಸಖತ್ ಟ್ರೆಂಡಿಂಗ್ನಲ್ಲಿದ್ದು, ಕೆಲವೆ ಚಿತ್ರಮಂದಿರಗಳಲ್ಲಿ ಶೋಗಳು ಈಗಾಗಲೇ ಹೌಸ್ಫುಲ್ ಆಗಿವೆ. ಬೆಂಗಳೂರು, ಆಂಧ್ರ, ತೆಲಂಗಾಣ ಸೇರಿ ಹಲವೆಡೆ ಬೇಡಿಕೆ ಜೋರಾಗಿದೆ. ಅರ್ಲಿ ಮಾರ್ನಿಂಗ್ ಶೋಗಳನ್ನೂ ಪ್ರದರ್ಶಿಸಲಾಗುತ್ತಿದೆ.
ಚಿತ್ರವನ್ನು ‘ಜೆರ್ಸಿ’ ಖ್ಯಾತಿಯ ನಿರ್ದೇಶಕ ಗೌತಮ್ ತಿನನೂರಿ ನಿರ್ದೇಶಿಸಿದ್ದಾರೆ. ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ, ಸತ್ಯದೇವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ಥ್ರಿಲ್ಲರ್ ಅಂಶದ ಜೊತೆಗೆ ಸಹೋದರರ ಭಾವನಾತ್ಮಕ ಸಂಬಂಧವನ್ನೂ ಒಳಗೊಂಡಿದೆ.
ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ, “ನಮ್ಮ ಮನೆಯಲ್ಲಿ ಅಂಜಿಕೆಯೂ ಇದೆ, ಆದರೆ ನಂಬಿಕೆಯೂ ಇದೆ. ಪ್ರೇಕ್ಷಕರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವೂ ಇದೆ” ಎಂದು ಮಾತನಾಡಿದ್ದಾರೆ. ಸಿನಿಮಾ ಹಿಟ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ಜುಲೈ 31ರಂದು ‘ಕಿಂಗ್ಡಮ್’ ಬೆಳ್ಳಿತೆರೆಯಲ್ಲಿ ತನ್ನ ಸಾಮ್ರಾಜ್ಯವನ್ನೇ ನಿರ್ಮಿಸಲಿದೆ ಎಂಬ ನಿರೀಕ್ಷೆ ಜೋರಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






