Bigg Boss: ಭವ್ಯಾ - ತ್ರಿವಿಕ್ರಮ್ ನಡುವೆ ಸಮ್ಥಿಂಗ್ ಸಮ್ಥಿಂಗ್: ಕಿಚ್ಚ ಸುದೀಪ್ ಹೀಗೆ ಹೇಳಿದ್ಯಾಕೆ..?

ಜನವರಿ 12, 2025 - 20:21
 0  10
Bigg Boss: ಭವ್ಯಾ - ತ್ರಿವಿಕ್ರಮ್ ನಡುವೆ ಸಮ್ಥಿಂಗ್ ಸಮ್ಥಿಂಗ್: ಕಿಚ್ಚ ಸುದೀಪ್ ಹೀಗೆ ಹೇಳಿದ್ಯಾಕೆ..?

 

ಬಿಗ್ ಬಾಸ್ ಸೀಸನ್ 11 ಆಟ ಆರಂಭದಿಂದಲೂ ಜೋರಾಗಿಯೇ ಇತ್ತು. ಇದೀಗ ಶೋ ಮುಗಿಯೋ ದಿನಗಳು ಹತ್ತಿರ ಬರ್ತಿದೆ. ಆರಂಭದಲ್ಲಿ ಅಬ್ಬರಿಸಿದವರು ಈವರೆಗೂ  ದೊಡ್ಮನೆಯಲ್ಲಿ ಸಖತ್ ಆಗಿಯೇ ಗೇಮ್ ಆಡಿದ್ದಾರೆ. ಫಿನಾಲೆಗೆ ಕೆಲವೇ ದಿನಗಳಿದೆ. ಇನ್ನೂ ಇದರ ಮದ್ಯೆ ಬಿಗ್ಬಾಸ್ಮನೆಯಲ್ಲಿ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ನಡುವೆ ಪ್ರೀತಿ ಚಿಗುರುತ್ತಿದೆ ಎಂಬ ಅನುಮಾನ ಮನೆಮಂದಿಗೆ ಶುರುವಾಗಿದೆ.

ಹೌದು ಭವ್ಯಾ ಮತ್ತು ತ್ರಿವಿಕ್ರಮ್ ಆರಂಭದಿಂದಲೂ ಒಬ್ಬರಿಗೊಬ್ಬರು ಎಂಬಂತೆ ಅಂಟಿಕೊಂಡೇ ಆಟ ಆಡುತ್ತಿದ್ದಾರೆ. ಈಗ ತಮ್ಮ ಸ್ನೇಹವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಸೂಚನೆಯನ್ನು ಬಿಗ್ಬಾಸ್ನಲ್ಲೇ ನೀಡಿದ್ದಾರೆ.

ಶನಿವಾರದ ಎಪಿಸೋಡ್ ಪ್ರಸಾರವಾದಾಗ ಸುದೀಪ್ ಆಗಮಿಸುವ ಮೊದಲು ಹಿಂದಿನ ನಡೆದ ಕೆಲವು ಘಟನೆಗಳನ್ನು ತೋರಿಸಲಾಯ್ತು. ಸಂದರ್ಭದಲ್ಲಿ ಎಲ್ಲರೂ ಮಲಗಿದ ಮೇಲೆ ತ್ರಿವಿಕ್ರಮ್ ಮತ್ತು ಭವ್ಯಾ ಅವರು ಮೂಲೆಯಲ್ಲಿ ಕೂತು ಏನೋ ವಿಷಯ ಮಾತನಾಡುತ್ತಿದ್ದರು. ಮೊದಲಿಗೆ ಅದು ಏನೆಂದು ವೀಕ್ಷಕರಿಗೆ ಗೊತ್ತಾಗಿರಲಿಲ್ಲವಾದರೂ ಅವರ ಮಾತುಕತೆ ಮುಂದುವರೆದಂತೆ ಅರ್ಥವಾಗಿದ್ದು, ಇಬ್ಬರೂ ಪ್ರೀತಿಯ ವಿಷಯ ಚರ್ಚಿಸುತ್ತಾರೆ ಎಂಬುದು.

ತ್ರಿವಿಕ್ರಮ್, ಭವ್ಯಾ ಕುರಿತು, ‘ನೀನು ನಾನು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲಎನ್ನುತ್ತಾರೆ. ಅದಕ್ಕೆ ಭವ್ಯಾ ಖುಷಿಯಿಂದ ಕೊಡುತ್ತೇನೆ, ಸ್ವಲ್ಪ ದಿನ ಕಾಯಿ ಎನ್ನುತ್ತಾರೆ. ‘ನೀನು ಆಡುತ್ತಿರುವ ರೀತಿ, ಮಾತನಾಡುತ್ತಿರುವುದು ನೋಡಿದರೆ ನೆಗೆಟಿವ್ ಉತ್ತರ ನೀಡುತ್ತೀಯ ಅನಿಸುತ್ತಿದೆಎನ್ನುತ್ತಾರೆ ತ್ರಿವಿಕ್ರಮ್. ಅದಕ್ಕೆ ಭವ್ಯಾ ನಗುತ್ತಾ, ‘ಅಯ್ಯೋ ಹಾಗೇನಿಲ್ಲ. ಸ್ವಲ್ಪ ವೇಟ್ ಮಾಡುಎಂದು ನಗುತ್ತಾ ಹೇಳುತ್ತಾರೆ. ಹಾಗೆ ಮಾತು ಮುಂದುವರೆಸಿ, ‘ಸ್ವಲ್ಪ ದಿನ ಆಗಲಿ, ಹೊರಗೆ ಹೋದ ಮೇಲೆ ಹೇಳುತ್ತೀನಿಎಂದು ಭವ್ಯಾ ಹೇಳುತ್ತಾರೆ. ತ್ರಿವಿಕ್ರಮ್ ಸಹ ಆಡಿ ಗೆದ್ದು ಮೇಲೆ ನಿನ್ನ ಬಳಿ ಬಗ್ಗೆ ಮಾತನಾಡುತ್ತೀನಿಎನ್ನುತ್ತಾರೆ. ಒಟ್ಟಾರೆ ಇಬ್ಬರೂ ಸಹ ಗುಟ್ಟಿನಲ್ಲಿ ಪ್ರೀತಿಯ ವಿಚಾರವನ್ನೇ ಮಾತನಾಡಿದ್ದಾರೆ ಎಂಬುದು ವೀಕ್ಷಕರಿಗೆ ಅರ್ಥವಾಗಿದೆ.

ಅಸಲಿಗೆ ಸ್ಪರ್ಧಿಗಳ ಪೋಷಕರು ಮನೆಗೆ ಬಂದಾಗ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರ ಮನೆಯವರೂ ಸಹ ಪರಸ್ಪರರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದರು. ನಂತರ ವೀಕೆಂಡ್ನಲ್ಲಿ ನಡೆದ ಆಕ್ಟಿವಿಟಿಯಲ್ಲಿ ಭವ್ಯಾ ಹಾಗೂ ತ್ರಿವಿಕ್ರಮ್ ಇಬ್ಬರು ಇನ್ನು ಮುಂದೆ ತಾವು ಪರಸ್ಪರರ ಗೆಳೆತನ ಮುರಿಯುವುದಾಗಿ ಹೇಳಿದ್ದರು. ನಂತರವೂ ಸಹ ಒಬ್ಬರ ಬಗ್ಗೆ ಇನ್ನೊಬ್ಬರು ಕೆಲ ಚುಚ್ಚು ಮಾತುಗಳನ್ನು ಆಡಿಕೊಂಡಿದ್ದರು. ಆದರೆ ಈಗ ನೋಡಿದರೆ ಪರೋಕ್ಷವಾಗಿ ಪ್ರೀತಿ, ಪ್ರೇಮ, ಪ್ರಣಯ ಎಂದೆಲ್ಲ ಮಾತನಾಡುತ್ತಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow