Fun Bucket Bhargav: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯೂಟ್ಯೂಬರ್’ಗೆ 20 ವರ್ಷ ಜೈಲು!

ಜನವರಿ 12, 2025 - 22:10
 0  20
Fun Bucket Bhargav: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯೂಟ್ಯೂಬರ್’ಗೆ 20 ವರ್ಷ ಜೈಲು!

 

ಮೈ ಗಾಡ್ಡೈಲಾಗ್ ಮೂಲಕವೇ ಟಿಕ್ಟಾಕ್ನಲ್ಲಿ ಖ್ಯಾತಿ ಪಡೆದು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ ಟಿಕ್ಟಾಕ್ ಸ್ಟಾರ್ಫನ್ ಬಕೆಟ್ ಭಾರ್ಗವ್ಎಂಬಾತನನ್ನು ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಹೌದು ಹದಿನಾಲ್ಕು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಆಂಧ್ರ ಪೊಲೀಸರು ಟಿಕ್ಟಾಕ್ ಸ್ಟಾರ್ ಚಿಪ್ಪಡಾ ಭಾರ್ಗವ್ ಅಲಿಯಾಸ್ ಫನ್ ಬಕೆಟ್ ಭಾರ್ಗವ್ನನ್ನು ವಿಶಾಖಪಟ್ಟಣಂನಲ್ಲಿ ಬಂಧಿಸಿದ್ದರು.

ಇದೀಗ 14 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ದಿಶಾ ಕಾಯ್ದೆ, ಫೋಕ್ಸೋ ಕಾಯ್ದೆಯಡಿ ಭಾರ್ಗವ್ ಬಂಧನವಾಗಿತ್ತು. ವಿಚಾರಣೆ ನಡೆಸಿರುವ ವಿಶಾಖಪಟ್ಟಣಂನ ಪೋಕ್ಸೋ ಕೋರ್ಟ್ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಮಹತ್ವದ ಆದೇಶ ನೀಡಿದೆ. ಕಠಿಣ ಜೈಲು ಶಿಕ್ಷೆಯ ಜೊತೆಗೆ ಫನ್ ಭಾರ್ಗವ್ ಅವರು ಸಂತ್ರಸ್ತ ಬಾಲಕಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ತೀರ್ಪು ನೀಡಲಾಗಿದೆ.

ಭಾರ್ಗವ್ ಮೇಲಿರುವ ಆರೋಪ ಏನು?

ಫನ್ ಭಾರ್ಗವ್ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪವಿದ್ದು, ಪ್ರಕರಣ ದಾಖಲಾಗಿತ್ತು. 2021ರಲ್ಲಿ ಭಾರ್ಗವ್ ಟಿಕ್ ಟಾಕ್ ವಿಡಿಯೋಗಳನ್ನು ಮಾಡುವ ನೆಪದಲ್ಲಿ ಬಾಲಕಿಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ ಅನ್ನೋ ಆರೋಪದಲ್ಲಿ ಕೇಸ್ ದಾಖಲಿಸಲಾಗಿತ್ತು.

ತೆಲುಗು ಯೂಟ್ಯೂಬರ್ ಫನ್ ಬಕೆಟ್ ಭಾರ್ಗವ್, ಬಾಲಕಿಯನ್ನ ತನ್ನ ಮನೆಗೆ ಕರೆದೊಯ್ದು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಂತ್ರಸ್ತ ಬಾಲಕಿಗೆ ವಿಷಯ ಬಾಯ್ಬಿಡದಂತೆ ಬೆದರಿಕೆ ಹಾಕಿದ್ದರಂತೆ. ಬಾಲಕಿ ಗರ್ಭಿಣಿಯಾದ ಬಳಿಕ ಆಕೆಯ ತಾಯಿ ದೂರು ನೀಡಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow