ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!

ಅಕ್ಟೋಬರ್ 19, 2025 - 09:14
 0  12
ಫುಟ್ಬಾಲ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ಬರೆದ ಲಿಯೋನೆಲ್ ಮೆಸ್ಸಿ!

ನ್ಯೂಜೆರ್ಸಿ: ಫುಟ್‌ಬಾಲ್‌ನ ಚರಿತ್ರೆಯಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಠಿಸಿರುವ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ, ಅಂತರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಅಸಿಸ್ಟ್‌ ನೀಡಿದ ಆಟಗಾರರಾಗಿ ಇತಿಹಾಸ ನಿರ್ಮಿಸಿದ್ದಾರೆ.

ಪೋರ್ಟೊರಿಕೊ ವಿರುದ್ಧ ನಡೆದ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 6-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಮೆಸ್ಸಿ ಎರಡು ಅಸಿಸ್ಟ್‌ಗಳನ್ನು ನೀಡಿದ್ದು, ಅವರ ಅಂತರಾಷ್ಟ್ರೀಯ ಅಸಿಸ್ಟ್‌ಗಳ ಸಂಖ್ಯೆ 60ಕ್ಕೆ ಏರಿದೆ.

ಇದರೊಂದಿಗೆ ಮೆಸ್ಸಿ, ಬ್ರೆಜಿಲ್‌ನ ನೇಮರ್ (58 ಅಸಿಸ್ಟ್‌) ಮತ್ತು ಅಮೆರಿಕದ ಲ್ಯಾಂಡನ್ ಡೊನೊವನ್ (58 ಅಸಿಸ್ಟ್‌) ಅವರನ್ನು ಹಿಂದಿಕ್ಕಿ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow