‘ಬಾಸಿಸಮ್ ಕಾಲ ಮುಗೀತು, ಮ್ಯಾಕ್ಸಿಸಮ್ ಮ್ಯಾಕ್ಸ್ ಕಾಲ ಶುರುವಾಯ್ತು’: ನಟ ದರ್ಶನ್ʼಗೆ ಟಾಂಗ್ ಕೊಟ್ರಾ ಕಿಚ್ಚ ಸುದೀಪ್!?

‘ಮ್ಯಾಕ್ಸ್’ ಸಿನಿಮಾದ ಬಗ್ಗೆ ಬಹಳ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೌದು ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು, ಬಹುತೇಕ ರಾಜ್ಯದ ಎಲ್ಲಾ ಥಿಯೇಟರ್ಗಳು ಹೌಸ್ಫುಲ್ ಆಗಿ ಓಡುತ್ತಿವೆ. ಇದೇ ಖುಷಿಯಲ್ಲಿ ನಟ ಸುದೀಪ್ ಮ್ಯಾಕ್ಸ್ ಟೀಂಗೆ ಔತಣಕೂಟ ಏರ್ಪಡಿಸಿ ಪಾರ್ಟಿ ಕೊಟ್ಟಿದ್ದಾರೆ. ಇದೀಗ ಈ ಸಂಭ್ರಮಾಚರಣೆ ವೇಲೆ ಸುದೀಪ್ ಕತ್ತರಿಸಿದ ಕೇಕ್ ಒಂದರ ಫೋಟೊ ಇದೀಗ ವೈರಲ್ ಆಗುತ್ತಿದೆ.
ಇನ್ನು ಕೇಕ್ನಲ್ಲಿ ಬಾಸಿಸಂ ಕಾಲ ಮುಗೀತು ಮಾಕ್ಸಿಮಮ್ ಕಾಲ ಶುರುವಾಯ್ತು ಎಂದು ಬರೆದು ಸಂಭ್ರಮಿಸಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಸುದೀಪ್ ಸಿನಿಮಾ ರಿಲೀಸ್ ಆಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆಗಳಿದ್ದವು. ಆ ನಿರೀಕ್ಷೆಗಳನ್ನು ಸಿನಿಮಾ ಹುಸಿಗೊಳಿಸಿಲ್ಲ. ಸಿನಿಮಾ ನೋಡಿ ಆಚೆ ಬಂದ ಪ್ರತಿಯೊಬ್ಬರು ಸಿನಿಮಾ ಅದ್ಭುತವಾಗಿದೆ ಎಂದೇ ಹೇಳುತ್ತಲಿದ್ದಾರೆ.
‘ಬಾಸಿಸಮ್ ಕಾಲ ಮುಗೀತು, ಮ್ಯಾಕ್ಸಿಸಮ್ ಮ್ಯಾಕ್ಸ್ ಕಾಲ ಶುರುವಾಯ್ತು’ ಎಂದು ಕೇಕ್ ಮೇಲೆ ಬರೆದಿದ್ದು, ಆ ಕೇಕ್ನ ಚಿತ್ರ ಇದೀಗ ವೈರಲ್ ಆಗಿದೆ. ನಟ ದರ್ಶನ್ಗೆ ಟಾಂಗ್ ನೀಡಲೆಂದೇ ‘ಮ್ಯಾಕ್ಸ್’ ಚಿತ್ರತಂಡದವರು ಈ ರೀತಿ ಸಾಲುಗಳನ್ನು ಕೇಕ್ ಮೇಲೆ ಬರೆಸಿದ್ದಾರೆ ಎನ್ನಲಾಗುತ್ತಿದೆ. ಸುದೀಪ್ ಅಭಿಮಾನಿಗಳು ಕೇಕ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಇದೇ ಸಮಯದಲ್ಲಿ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲು ಸೇರಿದ ಕಾರಣ ಚಿತ್ರೀಕರಣ ನಡೆಯಲಿಲ್ಲ. ‘ಡೆವಿಲ್’ ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಸರಿಯಾಗಿ ಈಗ ಸುದೀಪ್ರ ‘ಮ್ಯಾಕ್ಸ್’ ಸಿನಿಮಾ ಬಿಡುಗಡೆ ಆಗಿದೆ. ಮಾತ್ರವಲ್ಲದೆ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿರುವ ಜೊತೆಗೆ ದೊಡ್ಡ ಮಟ್ಟದ ಭರವಸೆಯನ್ನೂ ಸಹ ಮೂಡಿಸಿದೆ. ಈ ಕಾರಣಕ್ಕಾಗಿ ‘ಮ್ಯಾಕ್ಸ್’ ಚಿತ್ರತಂಡ ಇಂಥಹಾ ಕೇಕ್ ಒಂದನ್ನು ಕತ್ತರಿಸಿದೆ ಎನ್ನಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






