ನಿಮ್ಮಿಂದ ನಮಗೆ ಇರಿಟೇಟ್ ಆಗ್ತಿದೆ: ಕ್ಯಾಪ್ಟನ್ ಹಂಸಾ ಜಗದೀಶ್ ಮಧ್ಯೆ ಭವ್ಯಾ ಎಂಟ್ರಿ; ಸಿಡಿದೆದ್ದ ಲಾಯರ್ ಹೇಳಿದ್ದೇನು!?

ಬಿಗ್ ಬಾಸ್ ಮನೆಯಲ್ಲಿ ಸದ್ಯ ಲಾಯಕ್ ಜಗದೀಶ್ ಅವರ ಸೌಂಡ್ ಜಾಸ್ತಿಯಾಗಿದೆ. ಜಗದೀಶ್ ಮಾಡುತ್ತಿರುವ ಸದ್ದು ಗದ್ದಲ ಮನೆಯ ಇತರೆ ಸದಸ್ಯರಿಗೆ ಕಿರಿಕಿರಿಯೂ ಆಗಿರೋದು ಸುಳ್ಳಲ್ಲ. ಸ್ವರ್ಗ, ನರಕ ಎರಡೂ ಮನೆಯಲ್ಲಿ ಎರಡೂ ಮನೆಯಲ್ಲಿ ಒಂದೇ ಮಾತು ಕೇಳಿ ಬರುತ್ತಿದೆ. ಕ್ಯಾಪ್ಟನ್ ಹಂಸಾ ಅವರಿಗೆ ಲಾಯರ್ ಜಗದೀಶ್ ಅವರು ಸಿಕ್ಕಾಪಟ್ಟೆ ಕ್ವಾಟ್ಲೆ ಕೊಡುತ್ತಿದ್ದಾರೆ.
ಸ್ವರ್ಗದಲ್ಲಿದ್ದ ಲಾಯರ್ ಜಗದೀಶ್ ಅವರನ್ನ ನರಕಕ್ಕೆ ಕಳುಹಿಸಿದ್ದೇ ಹಂಸಾ ಅವರು. ಹೀಗಾಗಿಯೇ ಲಾಯರ್ ಜಗದೀಶ್ ಅವರ ಕ್ವಾಟ್ಲೆ ಎಷ್ಟಿದೆ ಅಂದ್ರೆ ಕ್ಯಾಪ್ಟನ್ ಹಂಸಾ ಅವರು ಕುಂತ್ರೂ ನಿಂತ್ರೂ ಕಾಡುತ್ತಿದ್ದಾರೆ. ಬಿಗ್ ಬಾಸ್ ನರಕ ನಿವಾಸಿಗಳಿಗೆ ಮೂರು ಹೊತ್ತು ಊಟ ಕೊಡಬೇಕು ಅನ್ನೋ ಆರ್ಡರ್ ಮಾಡಿರೋದು ಜಗದೀಶ್ ಅವರ ರೊಟ್ಟಿಗೆ ತುಪ್ಪ ಬಿದ್ದಂತೆ ಆಗಿದೆ
ಲಾಯರ್ ಜಗದೀಶ್ ಅವರು ಹಂಸಾ ನನಗೆ ಸಾಯಂಕಾಲ ಪನ್ನೀರ್ ಬಟ್ಟರ್ ಮಸಾಲ ಮತ್ತೆ ರೋಟಿ ಬೇಕು. ಅದು ಬೇಕು, ಇದು ಬೇಕು ಅಂತ ಹೇಳುತ್ತಲೇ ಇದ್ದಾರೆ. ಇದಕ್ಕೆ ರೋಸಿ ಹೋದ ಹಂಸಾ ಈ ಯಪ್ಪಾ ಸುಮ್ನೆ ಫುಟೇಜ್ ತೆಗೆದುಕೊಳ್ಳೋಕೆ ಏನೋ ಬೊಗಳಬೇಕು ಬೊಗಳುತ್ತಾ ಇರ್ತಾನೆ ಅಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಹಂಸಾ ಹಾಗೂ ಜಗದೀಶ್ ಅವರ ಈ ಜಗಳ ನೋಡಿದ ಮನೆಯ ಇತರೆ ಸದಸ್ಯರು ರೋಸಿ ಹೋಗಿದ್ದಾರೆ. ಇಂದು ಭವ್ಯಾ ಅವರು ಬೇರೆ ಟೈಮ್ನಲ್ಲೂ ನೆಮ್ಮದಿ ಕೊಡಲ್ಲ, ಊಟ ಮಾಡಬೇಕಾದ್ರೂ ನೆಮ್ಮದಿ ಕೊಡಿ ಎಂದು ಕೇಳಿದ್ದಾರೆ. ಅದಕ್ಕೂ ಉತ್ತರಿಸಿದ ಜಗದೀಶ್, ಬೆಳಗ್ಗೆ 5 ಗಂಟೆಗೆ ರೋಟಿ ಕೇಳಿದೆ ಇನ್ನೂ ಕೊಟ್ಟೇ ಇಲ್ಲ ಎಂದಿದ್ದಾರೆ.
ಜಗದೀಶ್ ಅವರಿಗೆ ಖಡಕ್ ಆಗಿಯೇ ಉತ್ತರಿಸಿದ ಭವ್ಯಾ, ಬೆಳಗ್ಗೆ 5 ಗಂಟೆಗೆ ಎದ್ದೇಳಿ ಅಂತ ಬಿಗ್ ಬಾಸ್ ಹೇಳಿಲ್ಲ ನಮಗೆ ಎಂದಿದ್ದಾರೆ. ಆಗ ನಾನು ನಿಮಗೆ ಹೇಳೇ ಇಲ್ಲ ಸೆಂಟರ್ನಲ್ಲಿ ನೀವು ಬರಬೇಡಿ ಎಂದು ಜಗದೀಶ್ ತಿರುಗೇಟು ಕೊಟ್ಟಿದ್ದಾರೆ. ಜಗದೀಶ್ ಅವರಿಗೆ ಭವ್ಯಾ ಅವರು ಇರಿಟೇಟ್ ಆಗ್ತಿದೆ ನಮಗೆ ಎನ್ನುತ್ತಾ ಬಿಗ್ ಬಾಸ್ ಮನೆಯ ಜಗಳದ ಬೆಂಕಿಗೆ ಕಿಚ್ಚು ಹಚ್ಚಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






