ಬೀದಿ ನಾಯಿಗಳ ಸ್ಥಳಾಂತರದ ಕುರಿತು ಸುಪ್ರೀಂನಿಂದ ಮಹತ್ವದ ಆದೇಶ! ಕರ್ನಾಟಕಕ್ಕೂ ಅನ್ವಯ

ಆಗಸ್ಟ್ 22, 2025 - 14:01
 0  12
ಬೀದಿ ನಾಯಿಗಳ ಸ್ಥಳಾಂತರದ ಕುರಿತು ಸುಪ್ರೀಂನಿಂದ ಮಹತ್ವದ ಆದೇಶ! ಕರ್ನಾಟಕಕ್ಕೂ ಅನ್ವಯ

ನವದೆಹಲಿ: ಬೀದಿ ನಾಯಿಗಳ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಹಿಡಿದಿರುವ ನಾಯಿಗಳನ್ನು ಯಾವುದೇ ಕಾರಣಕ್ಕೂ ಬಿಡುಗಡೆ ಮಾಡಬಾರದು ಎಂದು ಆದೇಶಿಸಿದ್ದ ಆಗಸ್ಟ್ 11ನೇ ಆದೇಶವನ್ನು ಸುಪ್ರೀಂ ಕೋರ್ಟ್ ಮಾರ್ಪಾಡು ಮಾಡಿದೆ.

ರೇಬೀಸ್ ಸೋಂಕಿಗೆ ಒಳಗಾದ ಅಥವಾ ಆಕ್ರಮಣಕಾರಿ ನಡವಳಿಕೆ ಹೊಂದಿರುವ ನಾಯಿಗಳನ್ನು ಹೊರತುಪಡಿಸಿ, ಹಿಡಿದಿರುವ ನಾಯಿಗಳನ್ನು ಕ್ರಿಮಿನಾಶಕ ಚಿಕಿತ್ಸೆ ಮತ್ತು ಲಸಿಕೆ ಹಾಕಿದ ನಂತರ ಮಾತ್ರ ರಸ್ತೆಗೆ ಬಿಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಆಗಸ್ಟ್ 14 ರಂದು, ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ವಿಶೇಷ ಪೀಠವು ಎಲ್ಲಾ ಪಕ್ಷಗಳ ವಾದಗಳನ್ನು ಪರಿಶೀಲಿಸಿದ ಬಳಿಕ ನಿರ್ಧಾರ ತೆಗೆದುಕೊಂಡಿತು. ಇದಕ್ಕೂ ಮುಂಚೆ, ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ಇಬ್ಬರು ನ್ಯಾಯಾಧೀಶರ ಪೀಠವು ದೆಹಲಿ–ಎನ್ಸಿಆರ್‌ನ ವಸತಿ ಪ್ರದೇಶಗಳಿಂದ ಎಲ್ಲಾ ಬೀದಿ ನಾಯಿಗಳನ್ನು ಹಿಡಿದು ಎಂಟು ವಾರಗಳಲ್ಲಿ ಆಶ್ರಯ ಮನೆಗಳಿಗೆ ಕಳುಹಿಸಲು ಆದೇಶ ನೀಡಿತ್ತು.

ಮುಖ್ಯ ಅಂಶಗಳು:

  • ಮುನ್ಸಿಪಲ್ ಕಾರ್ಪೊರೇಷನ್ ಆದೇಶದ ಸೆಕ್ಷನ್ 12, 12.1 ಮತ್ತು 12.2 ಪಾಲಿಸಬೇಕು.

  • ಜಂತುಹುಳು ನಿವಾರಣೆ, ಲಸಿಕೆ ಮತ್ತು ಕ್ರಿಮಿನಾಶಕ ಚಿಕಿತ್ಸೆಯ ನಂತರ ಹಿಡಿದಿರುವ ನಾಯಿಗಳನ್ನು ಅದೇ ಪ್ರದೇಶದಲ್ಲಿ ಬಿಡಬೇಕು.

  • ಆಕ್ರಮಣಕಾರಿ ಅಥವಾ ರೇಬೀಸ್ ಸೋಂಕಿತ ನಾಯಿಗಳನ್ನು ಯಾವುದೇ ಕಾರಣಕ್ಕೂ ಬಿಡಬಾರದು.

  • ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದು ನಿಷೇಧ, ಈ ಸಲುವಾಗಿ ಪ್ರತ್ಯೇಕ ಆಹಾರ ವಲಯಗಳನ್ನು ರಚಿಸುವಂತೆ ಸೂಚನೆ.

  • ಈ ಸೇವೆಗಳಲ್ಲಿ ಅಡ್ಡಿಪಡಿಸಿದರೆ, ಶ್ವಾನ ಪ್ರಿಯರು ಮತ್ತು ಎನ್ಜಿಒಗಳು ಕ್ರಮವಾಗಿ 25,000 ಮತ್ತು 2 ಲಕ್ಷ ರೂ. ಠೇವಣಿ ಇಡುವಂತೆ ಸೂಚನೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow